ನಾಗ್ಪುರ: ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿ ಎಸೆಯುವುದು ಆಕೆಯನ್ನು ಅವಮಾನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠ ಹೇಳಿದೆ. ಮಹಿಳೆಗೆ ಘನತೆ ಎಂಬುದು ಆಭರಣವಿದ್ದಂತೆ. ಅದಕ್ಕೆ ದಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 2011ರಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಶ್ರೀಕೃಷ್ಣ ತವರಿ ಎಂಬಾಬ ಪ್ರೇಮ ಪತ್ರ ನೀಡುತ್ತಾನೆ. ಆಕೆ ನಿರಾಕರಿಸಿದಾಗ ಆತ ಲವ್ ಲೆಟರ್ ಎಸೆದು ಪ್ರೇಮ ನಿವೇದನೆ ಮಾಡಿ ಅಶ್ಲೀಲವಾಗಿ ವರ್ತಿಸುತ್ತಾನೆ. ಈ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿದೆ. ತನ್ನ ಮೇಲಿನ ದೂರಿನ ಬಗ್ಗೆ ಆತ ಪ್ರತಿ ದೂರು ನೀಡಿದರೂ ವಿಚಾರಣೆ ವೇಳೆ ಆತನ ವಿರುದ್ಧ ಆರೋಪ ಸಾಬೀತಾಗಿತ್ತು.