ಕ್ರೈಂವೈರಲ್ ನ್ಯೂಸ್

40,000 ರೂ. ಗೆ 4 ವರ್ಷದ ಹೆಣ್ಣು ಮಗುವನ್ನು ಮಾರಿದ ಪೋಷಕರು..! 6 ಮಂದಿ ಅರೆಸ್ಟ್‌

248

ನ್ಯೂಸ್ ನಾಟೌಟ್: ಹಣಕಾಸಿನ ಸಮಸ್ಯೆಯಿಂದಾಗಿ ಪೋಷಕರು ತಮ್ಮ 4 ವರ್ಷದ ಹೆಣ್ಣು ಮಗುವನ್ನು 40,000 ರೂ.ಗಳಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ಇಂದು(ನ.28) ಬೆಳಕಿಗೆ ನಡೆದಿದೆ.

ಘಟನೆ ತಿಳಿದ ಕೂಡಲೇ ಮಗುವನ್ನು ರಕ್ಷಣೆ ಮಾಡಿರುವ ಬಡಗಡ ಪೊಲೀಸರು, ಪೋಷಕರು ಹಾಗೂ ಮಗು ಮಾರಾಟಕ್ಕೆ ಸಹಾಯ ಮಾಡಿದ ನಾಲ್ವರು ಸೇರಿ 6 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿ ದಂಪತಿ ಬಿಹಾರ ಮೂಲದವರಾಗಿದ್ದು, ಬಡಗಡ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬದಲ್ಲಿ ತುಂಬಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ತಮ್ಮ ನಾಲ್ಕು ವರ್ಷದ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು ಎಂದು ಬಡಗಡ ಪೊಲೀಸ್ ಠಾಣೆಯ ಪ್ರಭಾರಿ ತೃಪ್ತಿ ರಂಜನ್ ನಾಯಕ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ.

See also  ಅರಂತೋಡು:ಬೈಕ್ ಗಳ ನಡುವೆ ಡಿಕ್ಕಿ, ಸವಾರರಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget