ಅರಂತೋಡು: ಇಲ್ಲಿನ ಮುಖ್ಯ ಪೇಟೆಯಲ್ಲಿ ಸುಳ್ಯ ದಿಂದ ತೊಡಿಕಾನಕ್ಕೆ ತೆರಳುತ್ತಿದ್ದ ಬೈಕ್ ಗೆ ಸುಳ್ಯ ದಿಂದ ಗೂನಡ್ಕ ಕ್ಕೆ ತೆರಳುತ್ತಿದ್ದ ಕೆವಿಜಿ ಐಟಿಐ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕೆಟಿಎಮ್ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದೆ. ಎರಡೂ ಬೈಕಿನ ಸವಾರರು ಕೂಡ ರಸ್ತೆಗೆ ಎಸೆಯಲ್ಪಟ್ಟು ಸಣ್ಣಪುಟ್ಟ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.