ಕ್ರೈಂವೈರಲ್ ನ್ಯೂಸ್

4 ವರ್ಷದ ಮಗನ ಜೊತೆ ಐಸ್ ಕ್ರೀಂ ತಿನ್ನಲು ಹೋದ ತುಂಬು ಗರ್ಭಿಣಿ ಮೃತದೇಹ ಸೇತುವೆ ಕೆಳಗೆ ಪತ್ತೆ..! ಒಂದು ರಾತ್ರಿಯಿಡೀ ತಾಯಿಯ ಶವದೊಂದಿಗೆ ಅಳುತ್ತಾ ಕುಳಿತಿದ್ದ ಮಗು..! ಅಲ್ಲಿ ನಡೆದಿದ್ದಾದರೂ ಏನು..?

ನ್ಯೂಸ್ ನಾಟೌಟ್ : ತನ್ನ ನಾಲ್ಕು ವರ್ಷದ ಮಗನ ಜೊತೆ ಐಸ್​ಕ್ರೀಮ್ ತಿನ್ನಲು ಮನೆಯಿಂದ ಹೊರಗೆ ಹೋಗಿದ್ದ ತುಂಬು ಗರ್ಭಿಣಿಯ ಶವ ಮಹಾರಾಷ್ಟ್ರದ ವಾರ್ಧಾ ನದಿಯ ಸೇತುವೆ ಕಳೆಗಡೆ ಪತ್ತೆಯಾಗಿದೆ.

ಚಂದ್ರಪುರ ನಿವಾಸಿ ಸುಷ್ಮಾ ಅನ್ನುವ ಮಹಿಳೆ ತನ್ನ ಮಗ ದುರ್ವಂಶ್ ಜೊತೆ ಮಂಗಳವಾರ ರಾತ್ರಿ 9.30ಕ್ಕೆ ಮನೆಯಿಂದ ಹೊರಟಿದ್ದಳು. ಬಳ್ಳಾಪುರದ ಟೀಚರ್ಸ್​ ಕಾಲೋನಿಯಿಂದ ಐಸ್​ಕ್ರೀಂ ತರಲು ಹೋಗಿದ್ದಳು. ಮನೆಯಿಂದ ಹೊರಟು ಗಂಟೆಗಳೇ ಕಳೆದರೂ ತಾಯಿ-ಮಗ ಮನೆಗೆ ಬಂದಿರಲಿಲ್ಲ.

ಈಕೆಯ ಪತಿ ಪವನ್ ಕುಮಾರ್, ಕೆಲವು ಹೊತ್ತು ಸಂಬಂಧಿಕರ ಜೊತೆ ಹುಡುಕಾಟ ನಡೆಸಿದ್ದಾರೆ. ನಂತರ ಬಳ್ಳಾಪುರ ಠಾಣೆಗೆ ಬಂದು ದೂರು ನೀಡಿದ್ದರು ಎಂದು ಎಸ್​ಪಿ ರವೀಂದ್ರ ಸಿಂಗ್ ಪರದೇಸಿ ತಿಳಿಸಿದ್ದಾರೆ.

ರಾತ್ರಿ ಇಡೀ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಮಾರನೇಯ ದಿನ ರಾಜುರ-ಬಳ್ಳಾಪುರ ಸೇತುವೆ ಕಳೆಗಡೆ ಶವವಾಗಿ ಬಿದ್ದಿರೋದು ಕಂಡುಬಂದಿದೆ. ಅಲ್ಲಿಗೆ ಪೊಲೀಸರು ಹೋಗಿ ನೋಡಿದಾಗ ಆಕೆಯ ಮಗ ಅಲ್ಲೇ ಕೂತಿದ್ದ. ಏನೂ ಮಾಡಲಾಗದ ಸ್ಥಿತಿಯಲ್ಲಿ ಅಮ್ಮನ ಮೃತದೇಹದ ಮುಂದೆ ಕೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆಯಲ್ಲಿ ತುಂಬಾ ಕೆಸರು ಇತ್ತು. ಕಾಲು ಜಾರಿ ಸೇತುವೆ ಕೆಳಗೆ ಬಿದ್ದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರುತನಿಖೆಯನ್ನು ಮುಂದುವರಿಸಿದ್ದಾರೆ.

Related posts

ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದೇಕೆ ಪ್ರಧಾನಿ..? ತಮಿಳುನಾಡಿನ ಈ ಪುರಾತನ ದೇಗುಲಕ್ಕೂ ಅಯೋಧ್ಯ ರಾಮನಿಗೂ ಸಂಬಂಧವೇನು..?

ಕಾಸರಗೋಡು: ದೇವಸ್ಥಾನ ಉತ್ಸವದ ವೇಳೆ ಪಟಾಕಿ ದುರಂತ..! 150ಕ್ಕೂ ಹೆಚ್ಚು ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ..!

ಬೆಂಗಳೂರಿಗೂ ಹಬ್ಬಿದ ಧ್ವಜ ಗಲಾಟೆ..! ಹಸಿರು ಬಾವುಟ ತೆಗೆದು ರಾಷ್ಟ್ರಧ್ವಜ ನೆಟ್ಟ ಪೊಲೀಸರು..!