ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

4 ವರ್ಷದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಬಲತ್ಕಾರ ಮಾಡಿದ್ದ ಶಾಲಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ..! ಬೇರೆ ಜೈಲಿಗೆ ಆರೋಪಿಗಳ ವರ್ಗಾವಣೆಯ ವೇಳೆ ಘಟನೆ..!

ನ್ಯೂಸ್‌ ನಾಟೌಟ್‌: ಆಗಸ್ಟ್ 17 ರಂದು ಮಹಾರಾಷ್ಟ್ರದ ಪ್ರತಿಷ್ಠಿತ ನರ್ಸರಿ ಶಾಲೆಯಲ್ಲಿ 4 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ಶಾಲಾ ಸಿಬ್ಬಂದಿ ಬಲತ್ಕಾರ ಮಾಡಿದ್ದ ಘಟನೆ ಮುಂಬೈನ ಬದ್ಲಾಪುರದಲ್ಲಿ ನಡೆದಿತ್ತು. ಶಾಲಾ ಶೌಚಾಲಯದಲ್ಲಿ ಈ ಘಟನೆ ನಡೆದಿತ್ತು.

ಮಾಹಿತಿ ಹೊರಬೀಳುತ್ತಿದ್ದಂತೆ ಪೋಷಕರು ಸೇರಿದಂತೆ ಸ್ಥಳೀಯರು ಶಾಲೆಗೆ ಮುತ್ತಿಗೆ ಹಾಕಿದ್ದರು. ಘಟನೆ ಬೆನ್ನಲ್ಲೇ ಪೊಲೀಸರು ಆರೋಪಿ ಅಕ್ಷಯ್ ಶಿಂಧೆಯನ್ನು ಬಂಧಿಸಿದ್ದರು. ಇದೀಗ ಆರೋಪಿಯನ್ನು ಥಾಣೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಥಾಣೆ ಪೊಲೀಸರು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಅಕ್ಷಯ್ ಶಿಂಧೆ ಪೊಲೀಸರ ರಿವಾಲ್ವರ್ ವಶಪಡಿಸಿಕೊಂಡು ಗುಂಡು ಹಾರಿಸಿದ್ದಾನೆ. ಮೂರು ಸುತ್ತಿನ ಗುಂಡಿನಲ್ಲಿ ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಾಗಿ ಗಾಯಗೊಂಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಆರೋಪಿ ಬಳಿಕ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ, 4 ವರ್ಷದ ಪುಟ್ಟ ಮಕ್ಕಳನ್ನು ಶಾಲಾ ಗುಮಾಸ್ತಾ ಬಳಸಿಕೊಂಡಿದ್ದ. ಇದೇ ರೀತಿ ಹಲವು ಬಾರಿ ಹಲವು ಮಕ್ಕಳನ್ನು ಈತ ಬಳಸಿಕೊಂಡಿದ್ದಾನೆ ಅನ್ನೋದು ತನಿಖೆಯಿಂದ ಬಹಿರಂಗವಾಗಿತ್ತು. ಮಕ್ಕಳು ತೀವ್ರ ನೋವಿನಿಂದ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಪೋಷಕರು, ಕುಟುಂಬಸ್ಥರು ಶಾಲೆಗೆ ಆಗಮಿಸುತ್ತಿದ್ದಂತೆ ಈ ಮಾಹಿತಿ ಸ್ಥಳೀಯರಿಗೆ ಹಬ್ಬಿದೆ. ಶಾಲೆಗೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಮುತ್ತಿಗೆ ಹಾಕಿದ್ದರು. ಮಹಾರಾಷ್ಟ್ರದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು.

Click

https://newsnotout.com/2024/09/tirupati-telangana-kannada-news-devotee-allegation-kannada-news/
https://newsnotout.com/2024/09/294-mobiles-phones-are-exports-illegally-to-nepal-cought-kannada-news/

Related posts

ಡಿಸಿಎಂ ಡಿಕೆಶಿಗೆ ಮತ್ತೆ ಬಂಧನ ಭೀತಿ..? ಸಿಬಿಐ ತನಿಖೆ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ನೂತನ ಸಂಸತ್ ಭವನದ ಉದ್ಘಾಟನೆಯಂದು ಬಿಡುಗಡೆಯಾಗಲಿದೆ ಹೊಸ ನಾಣ್ಯ! ಎಷ್ಟು ರೂ. ಮೌಲ್ಯ? ನಾಣ್ಯದಲ್ಲಿ ದೇವನಾಗರಿ ಲಿಪಿ ಬಳಸಿದ್ದೇಕೆ?

ಇಸ್ರೇಲ್‌ನಲ್ಲಿ ಉಗ್ರರಿಂದ ಸಹೋದರಿ – ಬಾವನ ಹತ್ಯೆ, ಕಣ್ಣೀರಿಟ್ಟು ದಾರುಣ ಘಟನೆ ಬಗ್ಗೆ ಬಿಚ್ಚಿಟ್ಟ ‘ನಾಗಿನ್’ ನಟಿ ಮಧುರಾ ನಾಯ್ಕ್