Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮೊಮ್ಮಗನೊಂದಿಗೆ ಓಡಿ ಹೋದ 4 ಮಕ್ಕಳ ತಾಯಿ..! ಇಲ್ಲಿದೆ ವಿಚಿತ್ರ ಘಟನೆ..!

693
Pc Cr: Udayavani

ನ್ಯೂಸ್ ನಾಟೌಟ್: 55 ವರ್ಷದ ಮಹಿಳೆಯೊಬ್ಬಳು 30 ವರ್ಷದ ಮೊಮ್ಮಗನ ಜತೆ ಓಡಿ ಹೋಗಿ ವಿವಾಹವಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಕುಟುಂಬ ಸದಸ್ಯರು ಆಘಾತಗೊಂಡಿದ್ದಾರೆ.

ಇಂದ್ರಾವತಿ (55ವರ್ಷ) ಎಂಬ ಮಹಿಳೆಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ.
ಇಬ್ಬರು ಗೋವಿಂದ್‌ ಸಾಹಿಬ್‌ ದೇವಸ್ಥಾನಕ್ಕೆ ತೆರಳಿ, ಮಾಲೆ ಅದಲು ಬದಲು ಮಾಡಿಕೊಂಡು, ಮೊಮ್ಮಗ ಈಕೆಯ ಹಣೆಗೆ ಕುಂಕುಮ ಹಚ್ಚಿ, ಸಪ್ತಪದಿ ತುಳಿಯುವ ಮೂಲಕ ವಿವಾಹವಾಗಿರುವುದಾಗಿ ವರದಿ ವಿವರಿಸಿದೆ.

ಅಂಬೇಡ್ಕರ್‌ ನಗರದಲ್ಲಿ ಇಂದ್ರಾವತಿ ಮತ್ತು ಆಜಾದ್‌ ಅಕ್ಕ-ಪಕ್ಕ ವಾಸವಾಗಿದ್ದರು. ಸಂಬಂಧದಲ್ಲಿ ಆಜಾದ್‌ ಇಂದ್ರಾವತಿಯ ಮೊಮ್ಮಗ. ಆದರೆ ಕೆಲವು ಸಮಯದಿಂದ ಇಬ್ಬರ ನಡುವೆ ಸಂಬಂಧ ಇತ್ತು ಎನ್ನಲಾಗಿದೆ. ಮೊಮ್ಮಗನಾಗಿದ್ದ ಕಾರಣ ಯಾರೊಬ್ಬರೂ ಕೂಡಾ ಇವರ ಸಂಬಂಧದಿಂದಾಗಿ ಅನುಮಾನ ಪಟ್ಟಿರಲಿಲ್ಲ.

ಆದರೆ ಇತ್ತೀಚೆಗೆ ಇಂದ್ರಾವತಿ ಮತ್ತು ಆಜಾದ್ ರಹಸ್ಯವಾಗಿ ಮಾತನಾಡುತ್ತಿರುವುದನ್ನು ಪತಿ ಚಂದ್ರಶೇಖರ್‌ ಕೇಳಿಸಿಕೊಂಡ ಮೇಲೆ ಇಬ್ಬರ ನಡುವೆ ಸಂಬಂಧ ಇದ್ದಿರುವ ಬಗ್ಗೆ ಶಂಕೆ ಮೂಡಿಸಲು ಕಾರಣವಾಗಿತ್ತು. ನಂತರ ತಾವಿಬ್ಬರೂ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡ ಮೇಲೆ ಪತಿ ಚಂದ್ರಶೇಖರ್‌ ಇಬ್ಬರಿಗೂ ಪ್ರತ್ಯೇಕವಾಗಲು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಇಂದ್ರಾವತಿ ಮತ್ತು ಆಜಾದ್‌ ಗಂಡನ ಮನವಿ ತಿರಸ್ಕರಿಸಿ, ಮದುವೆಯಾಗುವುದಾಗಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಕೊನೆಗೆ ಪತಿ ಚಂದ್ರಶೇಖರ್‌ ಈ ಸಮಸ್ಯೆ ಬಗೆಹರಿಸಿಕೊಡುವಂತೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಆದರೆ ಇಬ್ಬರೂ ವಯಸ್ಕರಾಗಿರುವುದರಿಂದ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಈಗ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಜೊತೆಯಲ್ಲಿ ಆಡುವಾಗ ಮಗುವಿನ ಕಾಲಿಗೆ ಪೆಟ್ಟು, ಮಗುವಿಗೆ ಏನಾಗುತ್ತೋ ಎನ್ನುವ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ..! ಇಲ್ಲಿದೆ ಕರುಣಾಜಕ ಘಟನೆ..!

ರಬ್ಬರ್ ಟ್ಯಾಪಿಂಗ್ ಗೆ ಹೋಗಿದ್ದ ಮಹಿಳೆ ಕಾಡಾನೆ ದಾಳಿಗೆ ಸಾವು..! ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಭೇಟಿ

See also  ರಾಜ್ಯದ 8 ರೈಲುಗಳ ಸಂಚಾರ 8 ದಿನಗಳ ಕಾಲ ರದ್ದು..! ಹಲವು ರೈಲುಗಳ ಮಾರ್ಗ ಬದಲಾವಣೆ,ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget