ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

30 ವರ್ಷದ ಮಹಿಳೆಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ಗ್ರೇಟ್‌ ಖಲಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ತನ್ನ ದಢೂತಿ ದೇಹದಿಂದಲೇ ದೇಶಾದ್ಯಂತ ಖ್ಯಾತಿ ಗಳಿಸಿರುವ, ಡಬ್ಲ್ಯೂಡಬ್ಲ್ಯೂಇನಲ್ಲಿ (WWE) ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟು ದಿ ಗ್ರೇಟ್‌ ಖಲಿ ವಿಶ್ವದಲ್ಲೇ ಅತಿ ಕುಬ್ಜ ಮಹಿಳೆ ಎನಿಸಿರುವ ಜ್ಯೋತಿ ಆಮ್ಗೆ (Jyoti Amge)ಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಮಹಾರಾಷ್ಟ್ರದವರಾದ ಜ್ಯೋತಿ ಆಮ್ಗೆ (30) ಅವರು ಕೇವಲ 2.3 ಅಡಿ ಎತ್ತರವಾಗಿದ್ದು, ಜಗತ್ತಿನಲ್ಲೇ ಅತಿ ಕುಬ್ಜ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇವರು ಗಿನ್ನಿಸ್‌ ದಾಖಲೆಗೂ ಭಾಜನರಾಗಿದ್ದಾರೆ. ಜ್ಯೋತಿ ಆಮ್ಗೆ ಹಾಗೂ ದಿ ಗ್ರೇಟ್‌ ಖಲಿ ಅವರು ಇತ್ತೀಚೆಗೆ ಭೇಟಿಯಾಗಿದ್ದು, ಗ್ರೇಟ್‌ ಖಲಿ ಅವರು ತಮಾಷೆಗಾಗಿ ಅವರನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ್ದಾರೆ.

ಆದರೆ, ತಮಾಷೆಗಾಗಿ ಒಂದೇ ಕೈಯಲ್ಲಿ ಮಗುವಿನಂತೆ ಎತ್ತಿ ಆಡಿಸಿದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಗ್ರೇಟ್‌ ಖಲಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ನಿಮ್ಮನ್ನು ನಾಗ್ಪುರಕ್ಕೆ ಕಳುಹಿಸಿಬಿಡುತ್ತೇನೆ” ಎಂದು ತಮಾಷೆ ಮಾಡಿದ್ದಾರೆ. ಇದರಿಂದ ಜ್ಯೋತಿ ಆಮ್ಗೆ ಅವರು ನಾಚಿ ನೀರಾಗಿದ್ದಾರೆ. ಆದರೆ ಹಲವರು ಬ್ಯಾಡ್ ಟಚ್ ಎಂದು ಕಾಮೆಂಟ್ ಮಾಡಿದ್ದಾರೆ.

Click 👇

https://newsnotout.com/2024/05/election-and-re-voting-misleading
https://newsnotout.com/2024/05/narendra-modi-and-teacher-rajak

Related posts

‘ನ್ಯೂಸ್ ನಾಟೌಟ್’ ಗ್ರೂಪ್ ನಿಂದ ನಂಬರ್ ಕದ್ದು ಯುವತಿಗೆ ಕಿರುಕುಳ ಆರೋಪ..! ಅನಾಮಧೇಯ ವ್ಯಕ್ತಿಗಳ ಕಾಟದಿಂದ ತಪ್ಪಿಸಿಕೊಳ್ಳೋದು ಹೇಗೆ..? ಇಲ್ಲಿದೆ ಡಿಟೇಲ್ಸ್

ವಾಟ್ಸಪ್ ಬಳಕೆದಾರರೆ ನಿಮ್ಮ ಖಾತೆ ನಿಷೇಧವಾಗದಂತೆ ನೋಡಿಕೊಳ್ಳುವುದು ಹೇಗೆ?

ರೈತರಿಗೆ ಮಾತ್ರವಲ್ಲ ಬ್ರಾಹ್ಮಣರಿಗೂ ಹೆಣ್ಣು ಸಿಗ್ತಿಲ್ಲವಂತೆ ಯಾಕೆ..? ಅನಾಥಾಶ್ರಮದ ಹುಡುಗಿಯರನ್ನು ಮದುವೆಯಾದ್ರ ಅರ್ಚಕರು?