ನ್ಯೂಸ್ ನಾಟೌಟ್ : ರಾಮಮಂದಿರ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭ ರಾಮ ಭಕ್ತರು ಸಂಭ್ರಮಿಸಿದ್ದರು. ಈ ವೇಳೆ ಯಾರೋ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಶ್ರೀರಾಮಚಂದ್ರ ಮತ್ತು ಆತನ ಸಹೋದರ ಲಕ್ಷಣ್ ಹೆಸರಿನಲ್ಲಿ ಚೆಕ್ ಬರೆದಿದ್ದು ಸದ್ಯ ಭಾರಿ ಕುತೂಹಲದ ಕೇಂದ್ರ ಬಿಂದುವಾಗಿದೆ. ಈ ಚೆಕ್ ನಿಜಕ್ಕೂ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಎನ್ನುವ ಹೆಸರಿನಲ್ಲೇ ಇದೆ. ರಾಮ-ಲಕ್ಷ್ಮಣರ ಭಾವಚಿತ್ರದೊಂದಿಗೆ ಇರುವ ಈ ಚೆಕ್ ಅಸಲಿ ಎನ್ನುವುದು ಕೂಡ ಸದ್ಯಕ್ಕೆ ಸಾಬೀತಾಗಿದೆ.
ರಾಜಾಸ್ಥಾನದ ಡುಂಗರಪುರದ ಮಹಾರಾಜರ ಕಾಲದಲ್ಲೂ ಬ್ಯಾಂಕುಗಳು ಇದ್ದವು. ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಹೆಸರಿನ ಬ್ಯಾಂಕ್ ಕೂಡ ಇತ್ತು ಎನ್ನುವುದು ಇದೀಗ ಸುದ್ದಿಯಾಗಿದೆ. ಆ ಬ್ಯಾಂಕ್ ಹೆಸರಿನಲ್ಲಿ ಕೊಟ್ಟಿದ್ದ ಅಸಲಿ ಚೆಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹವಾ ಕ್ರಿಯೆಟ್ ಮಾಡಿದೆ.
19ನೇ ಶತಮಾನದ ಕಾಲದಲ್ಲಿ ಎನ್ನಲಾದ ಚೆಕ್ ಇದು ಎಂದು ಹೇಳಲಾಗುತ್ತಿದೆ. ಡುಂಗರಪುರ ಮಹಾರಾಜ ಮಹಾರಾವಲ್ ಲಕ್ಷ್ಮಣ್ ಸಿಂಗ್ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಸ್ಥಾಪಿಸಿದ್ದ ಎನ್ನಲಾಗಿದ್ದು ಆ ಚೆಕ್ ಫೋಟೋ ಈಗ ವೈರಲ್ ಆಗಿದೆ. ಬ್ಯಾಂಕ್ ಹೆಸರು ಜತೆಗೆ ಹೆಸರು ಕೂಡ ಎರಡೂ ಶ್ರೀರಾಮನ ಹೆಸರಿನಲ್ಲಿ ನಡೆಯುತ್ತಿತ್ತು. ಹಲವು ದಶಕಗಳಿಂದ ಅಸ್ತಿತ್ವದಲ್ಲಿದ್ದ ಈ ಬ್ಯಾಂಕ್ ಅನ್ನು ಸ್ವಾತಂತ್ರ್ಯ ಬಂದ ನಂತರ ಇತರೆ ಬ್ಯಾಂಕ್ ಜೊತೆ ವಿಲೀನಗೊಳಿಸಲಾಯಿತು.
ಇದರ ವಿನ್ಯಾಸ ತುಂಬಾ ಆಕರ್ಷಕಮಯವಾಗಿದೆ. ಚೆಕ್ ಮೇಲೆ ಸೀತಾರಾಮನ ಚಿತ್ರವಿತ್ತು. ಈ ಚೆಕ್ ಗಳನ್ನು ಲಕ್ನೋದ ಏನ್ ಕೆ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ರಾಜರ ಕಾಲದ ಬ್ಯಾಂಕುಗಳಿಗೆ ಯಾವುದೇ ಲಿಖಿತ ಸಂವಿಧಾನ ಇರಲಿಲ್ಲ. ಅನೇಕ ರಾಜರುಗಳ ಜೊತೆ ಸಾರ್ವಜನಿಕರು ಕೂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರು ಅನ್ನೋದೇ ವಿಶೇಷ.