ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಕೋಟ್ಯಾನು ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಯೋಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು,ವಿಭಿನ್ನತೆಯಿಂದ ಕೂಡಿದೆ.ಇದರೊಂದಿಗೆ ಸುಮಾರು 144 ವರ್ಷಗಳ ನಂತರ ರೂಪುಗೊಂಡ ಮಹಾಕುಂಭ ಮೇಳ ಇದಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಇದೀಗ ಕುಂಭಮೇಳಕ್ಕೆ ಸಂಬಂಧಿಸಿದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ತ್ರಿವೇಣಿ ಸಂಗಮ ನದಿಯಲ್ಲಿ ಬೃಹತ್ ಅನಕೊಂಡ ಕಾಣಿಸಿಕೊಂಡಿದೆ. ಅಲ್ಲಿ ಸ್ನಾನ ಮಾಡುತ್ತಿದ್ದವರು ಬೃಹತ್ ಹಾವನ್ನು ನೋಡಿ ಹೆದರಿದ್ದಾರೆ..ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಇದು AI ನಿಂದ ಸೃಷ್ಟಿಯಾದ ಹಾವು ಆಗಿದ್ದು, ಇದೀಗ ಕುಂಭಮೇಳದಲ್ಲಿ ಹಾವು ಪ್ರತ್ಯಕ್ಷವಾದಂತೆ ವಿಡಿಯೋ ಸೃಷ್ಟಿಸಿ ಭಕ್ತರನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ.ನೆಟ್ಟಿಗರು ನಿಜ ವಿಷಯ ತಿಳಿದ ನಂತರ ಸಮಾಧಾನಗೊಂಡಿದ್ದಾರೆ.. ಅಲ್ಲದೆ, ಈ ರೀತಿ ಮಾಡಿ ಪವಿತ್ರ ಕುಂಭಮೇಳದ ಹೆಸರನ್ನು ಕೆಡಿಸಬೇಡಿ ಅಂತ ಕಿಡಿಗೇಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ..