ನ್ಯೂಸ್ ನಾಟೌಟ್: ಗೀಸರ್ ನಲ್ಲಿ ಕ್ಯಾಮೆರಾ ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ದಾಖಲಿಸಿದ್ದ ಸುದ್ದಿ ವ್ಯಾಪಕ ವೈರಲ್ ಆಗುತ್ತಿದ್ದಂತೆ ಪ್ರಕರಣಕ್ಕೆ ಪೊಲೀಸರ ತನಿಖೆ ಟ್ವಿಸ್ಟ್ ನೀಡಿದ್ದು, ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಹಿಳೆಯೇ ಇಂತಹ ಬೃಹನ್ನಾಟಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿದ್ದ ವಿಡಿಯೋ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಆರೋಪಿ ಮತ್ತು ಸಂತ್ರಸ್ಥ ಮಹಿಳೆಯ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಪೊಲೀಸ್ ವಿಚಾರಣೆ ವೇಳೆ ಶಾಂಕಿಂಗ್ ಸತ್ಯಗಳು ಹೊರಬಂದಿವೆ.
ಇನ್ನು ಆರೋಪಿ ಮತ್ತು ಸಂತ್ರಸ್ಥ ಮಹಿಳೆಯನ್ನು ಠಾಣೆಗೆ ಕರೆತಂದ ಪೊಲೀಸರು ಗೀಸರ್ ನಲ್ಲಿ ಹೇಗೆ ಕ್ಯಾಮೆರಾ ಇಡಲು ಸಾಧ್ಯ ಎಂಬುದನ್ನು ಪ್ರಶ್ನಿಸಿದ್ದಾರೆ. ಗೀಸರ್ ಹೀಟ್ ಗೆ ಎಂತಹ ಎಲೆಕ್ಟ್ರಾನಿಕ್ ವಸ್ತುಗಳಾದರು ಮೆಲ್ಟ್ ಆಗುತ್ತದೆ. ಅಂತಹುದರಲ್ಲಿ ರಹಸ್ಯ ಕ್ಯಾಮೆರಾ ಹೇಗೆ ಕೆಲಸ ಮಾಡಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಶಾಂಕಿಂಗ್ ಸತ್ಯಗಳು ಗೊತ್ತಾಗಿದೆ.
ಪೊಲೀಸರ ತನಿಖೆ ಮುಂದುವರೆದಂತೆ, ಪೊಲೀಸರಿಗೆ ಆರೋಪಿ ಪುರುಷ ಮತ್ತು ಸಂತ್ರಸ್ಥ ಮಹಿಳೆ ನಡುವಿನ ಅಕ್ರಮ ಸಂಬಂಧ ಇತ್ತು ಎಂದು ಗೊತ್ತಾಗಿದೆ. ಈ ವೇಳೆ ಪೊಲೀಸರು ಇಬ್ಬರನ್ನೂ ಪ್ರತ್ಯೇಕಿಸಿ ವಿಚಾರಣೆ ನಡೆಸಿದ್ದು, ಸಂತ್ರಸ್ಥೆಯ ವಿಚಾರಣೆಗೆ ಮಹಿಳಾ ಅಧಿಕಾರಿಯನ್ನು ನೇಮಿಸಿದ್ದಾರೆ. ಈ ವೇಳೆ ಸಂತ್ರಸ್ಥೆ ಎನ್ನಲಾದ ಮಹಿಳೆ ಆಘಾತಕಾರಿ ಮಾಹಿತಿಗಳನ್ನು ಹೊರ ಹಾಕಿದ್ದಾರೆ.
ಮಹಿಳೆಯನ್ನು ವಿಚಾರಣೆ ನಡೆಸಿದ ಮಹಿಳಾ ಅಧಿಕಾರಿ ತನಿಖೆಯ ಪ್ರಕಾರ, ಆರೋಪಿ ಪುರುಷನೊಂದಿಗೆ ಈ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಆಕೆಯೇ ತನ್ನ ನಗ್ನ ಚಿತ್ರಗಳ ಸೆಲ್ಫಿ ತೆಗೆದುಕೊಂಡು ಆತನ ಮೊಬೈಲ್ ಗೆ ಕಳುಹಿಸಿದ್ದಳು.
ಆದರೆ ಈ ವಿಚಾರ ಮನೆಯವರಿಗೆ ತಿಳಿದಾಗ ಏನು ಮಾಡಬೇಕು ಎಂದು ತೋಚದೇ ಗೀಸರ್ ಕ್ಯಾಮೆರಾ ನಾಟಕವಾಡಿದ್ದಾಳೆ ಎನ್ನಲಾಗಿದೆ. ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಆರೋಪಿತ ವ್ಯಕ್ತಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಇದು ಹೈಡ್ರಾಮಾಕ್ಕೆ ಕಾರಣವಾಯಿತು ಎನ್ನಲಾಗಿದೆ. ಇನ್ನು ಈ ಪ್ರಕರಣ ಇತ್ಯರ್ಥವಾದ ಬೆನ್ನಲ್ಲೇ ಮಹಿಳೆ ದೂರು ನೀಡಲು ನಿರಾಕರಿಸಿದ್ದು, ಆರೋಪಿ ಪುರುಷ ಕೂಡ ತನ್ನ ನಡೆದ ಹಲ್ಲೆ ಹೊರತಾಗಿಯೂ ಯಾರ ಮೇಲೂ ದೂರು ನೀಡಲು ನಿರಾಕರಿಸಿದ್ದಾನೆ.