ನ್ಯೂಸ್ ನಾಟೌಟ್: ಚಾಲಕ ಮಲಗಿದ್ದ ವೇಳೆ ಮೀನಿನ ವಾಹನದ ನಿವಾರ್ಹಕರಿಬ್ಬರು ಲಕ್ಷಾಂತರ ರೂ. ಹಣ ಕಳವು ಮಾಡಿ ಪರಾರಿಯಾಗಿರುವ ಆರೋಪ ಉಡುಪಿಯ ಕಟಪಾಡಿಯಲ್ಲಿ ಕೇಳಿಬಂದಿದೆ.
ಕುಂದಾಪುರದ ಎಂಕೋಡಿಯ ಆಸ್ಮಾ ಎಂಬವರು ತನ್ನ ಮೀನಿನ ವಾಹನಕ್ಕೆ ಚಾಲಕರಾಗಿ ಅಬ್ದುಲ್ ಸತ್ತರ್ ಮತ್ತು ನಿರ್ವಾಹಕರಾಗಿ ಮುಹಮ್ಮದ್ ಅದ್ನಾನ್ ಹಾಗೂ ಆತನ ಸ್ನೇಹಿತ ನಿಶಾದ್ ರನ್ನು ನಿಯೋಜಿಸಿದ್ದರು. ನ.10ರಂದು ಬೆಳಗಿನ ಜಾವ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುಂಜಾನೆ 4ಗಂಟೆಗೆ ಮೀನಿನ ವಾಹನವನ್ನು ಕಟಪಾಡಿಯಲ್ಲಿ ನಿಲ್ಲಿಸಿ ಚಾಲಕ ಅಬ್ದುಲ್ ಸತ್ತಾರ್ ಮಲಗಿದ್ದರು.
ಬೆಳಗ್ಗೆ 6ಗಂಟೆಗೆ ಎಚ್ಚರವಾದಾಗ ವಾಹನದಲ್ಲಿ ಅದ್ನಾನ್ ಮತ್ತು ನಿಶಾದ್ ನಾಪತ್ತೆಯಾಗಿದ್ದರು. ಬಳಿಕ ಪರಿಶೀಲಿಸಿದಾಗ ವಾಹನದಲ್ಲಿ ಇಟ್ಟಿದ್ದ 4.25 ಲಕ್ಷ ರೂ. ನಗದು ಹಣವನ್ನು ಕಳವಾಗಿರುವುದು ಕಂಡುಬಂದಿದೆ. ಇವರಿಬ್ಬರು ಆ ಹಣವನ್ನು ಕದ್ದುಕೊಂಡು ಹೋಗಿದ್ದಾರೆಂದು ಪ್ರಕರಣ ದಾಖಲಾಗಿದೆ. ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click