ನ್ಯೂಸ್ ನಾಟೌಟ್: ಉತ್ತರ ಕನ್ನಡ ಮೂಲದ ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಅವರ ತಾಯಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪುಣೆಯ ಪ್ಲಾನ್ ವೊಂದರಲ್ಲಿ ಶುಕ್ರವಾರ (ಅ.4) ರಂದು ಪತ್ತೆಯಾಗಿದೆ.
ಮೃತಪಟ್ಟವರನ್ನು ಮಾಲಾ ಅಶೋಕ್ ಅಂಕೋಲಾ ಎಂದು ಗುರುತಿಸಲಾಗಿದೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಪುಣೆಯ ಡೆಕ್ಕನ್ ಜಿಮ್ಕಾನಾ ರಸ್ತೆಯಲ್ಲಿ ಶವದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಸುತ್ತಲೂ ಈಗ ಪೊಲೀಸರು ಕಣ್ಣಾಡಿಸಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಲಾ ಅಂಕೋಲಾ ಅವರು ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಲೀಲ್ ಅಂಕೋಲಾ 1989 ರಿಂದ 1997ರವರೆಗೆ ಒಂದು ಟೆಸ್ಟ್ ಹಾಗೂ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಇವರು ಕೆಲವು ಸಿನಿಮಾ ಹಾಗೂ ಟಿವಿ ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಪ್ರಣೀತಾ ಬ್ಯಾನರ್ಜಿಯನ್ನು ಸಲೀಲ್ ಅಂಕೋಲಾ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ವಿಪರೀತ ಕುಡಿತದ ಚಟದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಲೀಲ್ ಅವರನ್ನು ಪುಣೆಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದರ ಪರಿಣಾಮ ಪ್ರಣಿತಾ 2011ರಲ್ಲಿ ವಿಚ್ಛೇದನ ಪಡೆದಿದ್ದರು. 2013ರಲ್ಲಿ ಪುಣೆಯ ಗೀತಾ ಸೊಸೈಟಿ ನಿವಾಸದಲ್ಲಿ ಪ್ರಣೀತಾ ನೇಣಿಗೆ ಶರಣಾಗಿದ್ದರು.