ನ್ಯೂಸ್ ನಾಟೌಟ್: ದಲಿತ ಯುವತಿ ವಿಷ ಸೇವನೆಯಿಂದ ಮೃತಪಟ್ಟಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕನಕಗಿರಿ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 29ರಂದು ಈ ಪ್ರಕರಣ ನಡೆದಿತ್ತು. ಸಂಬಂಧಿಸಿ, 13 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
ಈವರೆಗೆ ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೆ ದಿನ ಮೃತ ಯುವತಿಯ ಗಂಡ ಹನುಮಯ್ಯ ಹಾಗೂ ಅವನ ತಂದೆ ಕಾಳಿಂಗಪ್ಪನನ್ನು ಅರೆಸ್ಟ್ ಮಾಡಲಾಗಿದೆ. ಸೋಮವಾರ ಹನುಮಯ್ಯನ ತಾಯಿ ಸೇರಿದಂತೆ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಈ ಘಟನಗೆ ಸಂಭಂದಿಸಿದಂತೆ ಅಟ್ರಾಸಿಟಿ ಮತ್ತು 304 B ಸೆಕ್ಷನ ಅಡಿ ಪ್ರಕರಣ ದಾಖಲಿಸಲಾಗಿದ್ದು,ಮರಣೋತ್ತರ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click