ನ್ಯೂಸ್ ನಾಟೌಟ್: ಮದುವೆಯಾಗಿ ಪತ್ನಿಯಿದ್ದರೂ ಅಕ್ರಮ ಸಂಬಂಧದ ಚಟ ಬಿಡದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬ ಸರ್ಕಾರಿ ರೆಸ್ಟ್ಹೌಸ್ನಲ್ಲಿ ಮಹಿಳಾ ಇನ್ಸ್ಪೆಕ್ಟರ್ ಜತೆ ಕಾಲ ಕಳೆಯುವಾಗ ರೆಡ್ ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದು ಒದೆ ತಿಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ವ್ಯಕ್ತಿಗೆ ಮದುವೆಯಾಗಿ ಮನೆಯಲ್ಲಿ ಪತ್ನಿ ಇದ್ದರೂ, ಆಗ್ರಾದಲ್ಲಿರುವ ಪೊಲೀಸ್ ರೆಸ್ಟ್ ಹೌಸ್ನಲ್ಲಿ ಮತ್ತೊಬ್ಬ ಮಹಿಳಾ ಇನ್ಸ್ಪೆಕ್ಟರ್ ಜತೆ ಕಾಲ ಕಳೆಯುತ್ತಿದ್ದರು. ಈ ವಿಷಯ ತಿಳಿದ ವ್ಯಕ್ತಿಯ ಪತ್ನಿ ನೇರವಾಗಿ ಸರ್ಕಾರಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ್ದಾರೆ. ಅಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಮಹಿಳಾ ಇನ್ಸ್ಪೆಕ್ಟರ್ ಒಟ್ಟಿಗೆ ಇರುವುದನ್ನು ಕಂಡು ಗಲಾಟೆ ಮಾಡಿದ್ದಾರೆ.
ಇದೇ ವೇಳೆ ಇನ್ಸ್ಪೆಕ್ಟರ್ ಪತ್ನಿಯ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ರೆಸ್ಟ್ ಹೌಸ್ನಿಂದ ಇನ್ಸ್ಪೆಕ್ಟರ್ನನ್ನು ಹೊರಗೆ ಎಳೆದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ನ ಬನಿಯಾನ್ ಹರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇನ್ನು, ಇನ್ಸ್ಪೆಕ್ಟರ್ ಪತ್ನಿಯೂ ಅಷ್ಟೇ, ಮಹಿಳಾ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೂ ಬೈದಿದ್ದಾರೆ, ರೆಸ್ಟ್ ಆವರಣದಲ್ಲಿಯೇ ಅವರ ಕೈ ಹಿಡಿದು ಎಳೆದಾಡಿದ್ದಾರೆ.
ಇನ್ಸ್ಪೆಕ್ಟರ್ ಆಗಿರುವ ಪತಿಯು ಮಹಿಳಾ ಇನ್ಸ್ಪೆಕ್ಟರ್ ಜತೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಮಹಿಳೆಗೆ ಅನುಮಾನ ಬಂದಿತ್ತು. ಇದೆಲ್ಲ ಸರಿ ಬರುವುದಿಲ್ಲ ಎಂಬುದಾಗಿ ಅವರು ಪತಿಯ ಮನವೊಲಿಸಲು ಯತ್ನಿಸಿದ್ದರು. ಎಷ್ಟು ಹೇಳಿದರೂ, ಮನೆ, ಕುಟುಂಬವನ್ನು ನಿರ್ಲಕ್ಷಿಸಿ, ಮಹಿಳಾ ಇನ್ಸ್ಪೆಕ್ಟರ್ ಜತೆ ಸುತ್ತಾಡುವುದು, ರೆಸ್ಟ್ ಹೌಸ್ಗಳಲ್ಲಿ ಕಾಲ ಕಳೆಯುವುದನ್ನು ಕಂಡು ಮಹಿಳೆಗೆ ರೋಸಿಹೋಗಿತ್ತು. ಇದರಿಂದ ರೆಡ್ಹ್ಯಾಂಡ್ ಆಗಿ ಹಿಡಿದು ಪಾಠ ಕಲಿಸಿದ್ದಾರೆ ಎಂದು ತಿಳಿದುಬಂದಿದೆ.