ನ್ಯೂಸ್ ನಾಟೌಟ್: ಆಸ್ಪತ್ರೆಯೊಂದರಲ್ಲಿ ಕಾನೂನು ಬಾಹೀರವಾಗಿ ಚಿತ್ರೀಕರಣ ನಡೆಸಿದ ಸಂಬಂಧ ನಟ ಫಹಾದ್ ಫಾಜಿಲ್ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಫಹದ್ ಫಾಜಿಲ್ ಒಳ್ಳೆಯ ಕ್ರೇಜ್ ಹುಟ್ಟಿಸಿದ್ದರು. ಈ ನಡುವೆ ಸಿನಿಮಾವೊಂದರ ಶೂಟಿಂಗ್ ಕಾರಣದಿಂದಾಗಿ ನಟನ ವಿರುದ್ಧ ಕೇರಳ ಮಾನವ ಹಕ್ಕುಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಜತೆಗ ಅವರ ವಿರುದ್ಧ ಸುಮೋಟೋ ಪ್ರಕರಣವೂ ದಾಖಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವ ಫಹಾದ್ ಫಾಜಿಲ್ ಮಲಯಾಳಂ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಗುರುವಾರ(ಜುಲೈ 4) ರಾತ್ರಿ ಎರ್ನಾಕುಲಂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಅಲ್ಲಿನ ರೋಗಿಗಳು ಪರದಾಡಿದ್ದಾರೆ ಎಂದು ವರದಿಯಾಗಿದೆ.
ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಸಾಮಾನ್ಯ ರೋಗಿಗಳನ್ನು ಸಹ ಅನುಮತಿಸಲಾಗುವುದಿಲ್ಲ. ಇಂತಹ ಕಡೆ ಶೂಟಿಂಗ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದು ಉನ್ನತ ಅಧಿಕಾರಿಗಳ ಗಮನಕ್ಕೆ ಹೋಗಿ, ಈ ಬಗ್ಗೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಬೀನಾ ಕುಮಾರಿ ಘಟನೆಯ ಸಂಪೂರ್ಣ ವರದಿ ನೀಡುವಂತೆ ಆದೇಶಿಸಿದ್ದಾರೆ. ಆದರೆ ಈ ಆರೋಪಗಳನ್ನು ಚಿತ್ರತಂಡ ತಳ್ಳಿಹಾಕಿದೆ. ಚಿತ್ರೀಕರಣಕ್ಕಾಗಿ ಆಸ್ಪತ್ರೆಯವರಿಗೆ 10ಸಾವಿರ ರೂ. ಸಂಭಾವನೆ ಪಡೆದಿರುವುದಾಗಿ ಬಹಿರಂಗಪಡಿಸಿದ್ದಾರೆ. ಆದರೆ, ಕೇರಳ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ನ ಮುಖಂಡ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
Click 👇