ನ್ಯೂಸ್ ನಾಟೌಟ್: ಸುಳ್ಯದ ಕಾಂತಮಂಗಲದ ಶಾಲಾ ವಠಾರದಲ್ಲಿ ವ್ಯಕ್ತಿಯೊಬ್ಬರನ್ನು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು ಕೇವಲ 24 ಗಂಟೆಯಲ್ಲಿ ಹಂತಕನ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯನ್ನು ಎಡಮಂಗಲ ಮೂಲದ ಉದಯ್ ಎಂದು ಹೇಳಲಾಗಿದೆ.
ಕಾಣಿಯೂರಿನಲ್ಲಿ ಮೃತ ವಸಂತ್ ಹಾಗೂ ಆರೋಪಿ ಉದಯ್ ಜೊತೆಯಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಇಬ್ಬರದ್ದು ಕೂಡ ಹುಲ್ಲು ಕೊಯ್ಯುವ ಕಾಯಕ. ಭಾನುವಾರ ರಾತ್ರಿ ಇಬ್ಬರು ಕೂಡ ಸುಳ್ಯಕ್ಕೆ ಬಂದಿದ್ದಾರೆ. ಇಬ್ಬರು ಕೂಡ ಬಾರ್ ವೊಂದರಲ್ಲಿ ಕುಡಿದಿದ್ದಾರೆ. ಮದ್ಯಪಾನದ ಮತ್ತಿನಲ್ಲಿ ಕಾಂತಮಂಗಲದಲ್ಲಿ ಒಬ್ಬರಿಗೊಬ್ಬರು ಜಗಳವಾಡಿಕೊಂಡಿದ್ದಾರೆ.
ಒಂದು ಹಂತದಲ್ಲಿ ಇಬ್ಬರ ಜಗಳ ತಾರಕಕ್ಕೇರಿದೆ. ಈ ಹಂತದಲ್ಲಿ ಉದಯ್ ತಂದೆ-ತಾಯಿಗೆ ವಸಂತ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಉದಯ್ ವಸಂತ್ ನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಭಾನುವಾರ ತಡರಾತ್ರಿ ಕೊಲೆಯಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂತಾ ಮಂಗಲ ಶಾಲಾ ವಠಾರದಲ್ಲಿ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿತ್ತು. ಪೊಲೀಸರು, ಶ್ವಾನ ದಳ ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕಿನಿಂದ ಸಾಗಿತ್ತು. ಈ ವೇಳೆ ಹಂತಕ ಗಡಿಬಿಡಿಯಲ್ಲಿ ಬಿಟ್ಟು ಹೋಗಿದ್ದ ಒಂದೇ ಒಂದು ಸಿಮ್ ಕಾರ್ಡ್ ನಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರತಿ ಕ್ರೈಂ ನಡೆದಾಗಲೂ ಹಂತಕ ಒಂದಲ್ಲ ಒಂದು ಸಾಕ್ಷಿಯನ್ನು ಬಿಟ್ಟು ಹೋಗಿರುತ್ತಾನೆ. ಅಂತೆಯೇ ಈ ಪ್ರಕರಣದಲ್ಲಿ ಸಿಮ್ ಕಾರ್ಡ್ ನಿಂದ ಹಂತಕ ಸಿಕ್ಕಿಹಾಕಿಕೊಂಡ ಅನ್ನುವುದು ವಿಶೇಷ.
Click 👇