ನ್ಯೂಸ್ ನಾಟೌಟ್: ಬೀದಿನಾಯಿಗಳ (Stray Dog) ಹೊಟ್ಟೆ ತುಂಬಿಸುತ್ತಿದ್ದ ಶ್ವಾನಪ್ರಿಯರಿಗೆ ಹೊಸಾ ನಿಯಮಗಳನ್ನು ಬೆಂಗಳೂರಿನ ಬಿ.ಬಿ.ಎಂ.ಪಿ ಸೂಚಿಸಿದೆ. ಮನೆ ಬಳಿಯೋ, ಅಂಪಾರ್ಟ್ ಮೆಂಟ್ಗಳ ಖಾಲಿ ಜಾಗದಲ್ಲೋ ಬೀದಿನಾಯಿಗೆ ಊಟ ಹಾಕ್ತಿದ್ದವರು ಇನ್ಮುಂದೆ ಬಿಬಿಎಂಪಿ ಹೇಳೋ ಟೈಮ್ ನಲ್ಲಿ, ಸೂಚಿಸೋ ಜಾಗದಲ್ಲೇ ಬೀದಿನಾಯಿಗಳಿಗೆ ಊಟ ಹಾಕೋಕೆ ತಿಳಿಸಲಾಗಿದೆ.
ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳು ತಮ್ಮದೇ ಆದ ಗ್ಯಾಂಗ್ ಕಟ್ಟ್ಕೊಂಡು ಓಡಾಡಿಕೊಂಡಿವೆ. ಪ್ರೀತಿಯಿಂದಲೋ ಅಥವಾ ವ್ಯರ್ಥವಾಗುತ್ತೆ ಅಂತಲೋ ಊಟ ಹಾಕ್ತಿದ್ದ ಬೆಂಗಳೂರಿಗರು ಇನ್ಮುಂದೆ ಈ ರೂಲ್ಸ್ ಪಾಲಿಸಬೇಕು. ಬೀದಿಗಳಲ್ಲಿ ಊಟ ಹಾಕುವಾಗ ನಾಯಿಗಳು ಗುಂಪು ಸೇರುತ್ತವೆ, ಈ ವೇಳೆ ಶ್ವಾನಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅಟ್ಯಾಕ್ ಮಾಡೋ ಸಾಧ್ಯತೆ ಇರೋದರಿಂದ, ಊಟ ನೀಡೋದಕ್ಕೆ ಸಮಯ ಹಾಗೂ ಜಾಗ ನಿಗಧಿ ಮಾಡೋದಕ್ಕೆ ಪಾಲಿಕೆ ಸಜ್ಜಾಗಿದೆ. ಬೆಳಗಿನ ಜಾವ 3 ರಿಂದ 4 ಗಂಟೆ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕುವಂತೆ ಪಾಲಿಕೆ ಸಲಹೆ ನೀಡಿದೆ. ಅಲ್ಲದೇ ಏರಿಯಾಗಳಲ್ಲಿ, ಅಪಾರ್ಟ್ ಮೆಂಟ್ ಗಳ ಮುಂದೆ ಎಲ್ಲಿ, ಯಾವಾಗ ನಾಯಿಗಳಿಗೆ ಊಟ ಹಾಕಬೇಕು ಅಂತಾ ಬೋರ್ಡ್ ಹಾಕೋಕು ಕೂಡ ಪಾಲಿಕೆ ಚಿಂತನೆ ನಡೆಸ್ತಿದೆ. ಸದ್ಯ ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ ಪ್ರಕರಣ ಕಡಿಮೆಯಾಗಲು ಕ್ರಮವಹಿಸಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ಊಟ ಹಾಕೋದರಿಂದ ಆಗೋ ಸಮಸ್ಯೆಗೆ ಬಗ್ಗೆ ದೂರುಗಳು ಬಂದ ಕಾರಣ ಈ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.