ನ್ಯೂಸ್ ನಾಟೌಟ್: ಹಣ ಸುಲಿಗೆಗಾಗಿ ಅಮಾಯಕರಿಗೆ ಕ್ರೂರ ಮೃಗಗಳಂತೆ ಚಿತ್ರಹಿಂಸೆ ನೀಡಿರು ಘಟನೆ ಕಲಬುರಗಿಯಲ್ಲಿ ನಡೆದಿದೆ. ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಿ ಹಾಗೂ ಇತರೆ ಇಬ್ಬರಿಗೆ ಮೂವರು ಕಿರಾತಕರು ಬೆತ್ತಲೆ ಮಾಡಿ ಮರ್ಮಾಂಗಗಳಿಗೆ ಶಾಕ್ ಕೊಟ್ಟಿದ್ದು ಬೆಳಕಿಗೆ ಬಂದದೆ. ಮನ ಬಂದಂತೆ ಬಡಿಗೆಯಿಂದ ಹಲ್ಲೆ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಿ ಅರ್ಜುನಪ್ಪ ಹಣಮಂತ ಮಡಿವಾಳ, ಎಂ.ಡಿ.ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಹಲ್ಲೆಗೆ ಒಳಗಾದವರು. ರಮೇಶ ದೊಡ್ಡಮನಿ ಎಂಬುವವರಿಗೆ ಸೆಕೆಂಡ್ ಹ್ಯಾಂಡ್ ಕಾರು ಬೇಕಿತ್ತು. ಅದನ್ನು ತೋರಿಸಲು ಹೋದಾಗ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಸೇರಿ ಮೂವರನ್ನೂ ಒಂದು ಮನೆಯಲ್ಲಿ ಕೂಡಿ ಹಾಕಿ ಆರೋಪಿಗಳು ಟಾರ್ಚರ್ ನೀಡಿದ್ದಾರೆ.
ಹಣಕ್ಕಾಗಿ ಬೇಡಿಕೆಯಿಟ್ಟು ಒಂದು ದಿನದವರೆಗೆ ಬೆತ್ತಲೆಯಲ್ಲಿಟ್ಟು ಪೀಡಿಸಿದ್ದಾರೆ. ಹಣ ನೀಡಲು ಒಪ್ಪಿಕೊಳ್ಳದಿದ್ದರೆ ನಿಮ್ಮ ಮನೆಗೆ ಹೆಣ ಹೋಗುತ್ತದೆ ಎಂದು ಬೆದರಿಸಿದ್ದಾರೆ. ಒಂದು ದಿನದ ನಂತರ ಸಂಜೆ ಪೊಲೀಸರು ಹಾಗರಗಾ ರಸ್ತೆಯಲ್ಲಿ ಬಂದ ತಕ್ಷಣ ದುಷ್ಕರ್ಮಿಗಳು ಹಲವರು ಓಡಿ ಹೋಗಿದ್ದಾರೆ. ಇಮ್ರಾನ್ ಪಟೇಲ್ ಮೆಹಬೂಬ್ ಪಟೇಲ್, ಮಹ್ಮದ್ ಮತೀನ್ ಅಲಿಯಾಸ್ ಸ್ಟೀಲ್ ಮತೀನ್ ಅಬ್ದುಲ್ ಸಲೀಮ್, ಮಹ್ಮದ್ ಜಿಯಾ ಉಲ್ ಹುಸೇನ್ ಅಬ್ದುಲ್ ಫಜಲ್, ಮಹ್ಮದ್ ಅಬಜಲ್ ಶೇಕ್ ಅನ್ವರ್ ಶೇಖ್, ಹುಸೇನ್ ಶೇಖ್ ಮೌಲಾಶೇಖ್, ರಮೇಶ ಭೀಮಣ್ಣ ದೊಡ್ಡಮನಿ, ಸಾಗರ ಶ್ರೀಮಂತ ಕೋಳಿ ಎಂಬ ಏಳು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಲ್ಲಿ ಬಯಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಿ ಅರ್ಜುನಪ್ಪ ಹಣಮಂತ ಮಡಿವಾಳ ಗುಲ್ಬರ್ಗ ವಿಶವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಮೃಗೀಯ ವರ್ತನೆಗೆ ಕಾರಣ ತನಿಖೆಯ ಬಳಿಕ ತಿಳಿಯಬೇಕಷ್ಟೆ.
Click 👇