ನ್ಯೂಸ್ ನಾಟೌಟ್: ವಿದೇಶಗಳಲ್ಲಿರುವ ಹಾರುವ ಕಾರುಗಳು ಮುಂದಿನ ವರ್ಷದಿಂದ ಭಾರತದಲ್ಲೂ ಆಗಸದಲ್ಲಿ ಹಾರಾಡಲಿವೆ. ಮುಂದಿನ ವರ್ಷ ಮುಗಿಯುವುದರೊಳಗಾಗಿ ಎಲೆಕ್ಟ್ರಿಕ್ ಹಾರುವ ಕಾರನ್ನು ತಯಾರಿಸುವ ಯೋಜನೆಯನ್ನು ಮದ್ರಾಸ್ ಐಐಟಿ ಹಾಕಿಕೊಂಡಿದೆ. ಈ ಬಗ್ಗೆ ಮಹೀಂದ್ರಾ ಸಂಸ್ಥೆಯ ಉದ್ಯಮಿ ಆನಂದ್ ಮಹೀಂದ್ರಾ ಅವರು eplane ಎಂಬ ಈ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಮದ್ರಾಸ್ ಐಐಟಿ ಕಾರ್ಯವನ್ನು ಅಭಿನಂದಿಸಿದ್ದಾರೆ. ಫೋಟೋವನ್ನು ಹಂಚಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ಕ್ರಿಯಾಶೀಲ ಮತ್ತು ಅದ್ಭುತವೆನಿಸುವ ಇನ್ಕ್ಯುಬೇಟರ್ ಆಗಿ ಮದ್ರಾಸ್ ಐಐಟಿ ದಾಪುಗಾಲಿಡುತ್ತಿದೆ. ನಿಜಕ್ಕೂ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಬೇಕಿದೆ. ಇತರೆ ದೇಶದ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಮಾದರಿಯಾಗುತ್ತಿರುವುದು ಸಂತಸ ವಿಚಾರ ಎಂದು ಕೊಂಡಾಡಿದ್ದಾರೆ.
ಈ ಎಲೆಕ್ಟ್ರಿಕ್ ಕಾರು 5.5 ಮೀಟರ್ ಸುತ್ತಳತೆ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 200 ಕಿ. ಮೀ. ತನಕ ಹೋಗಬಹುದು. ವರ್ಟಿಕಲ್ ಆಗಿಯೋ ಅದು ಟೇಕ್ ಆಫ್ ಆಗುತ್ತದೆ. ಮಾನವ ಸಂಪನ್ಮೂಲ ಹೊಂದಿರಲಿದೆ. ಕಡಿಮೆ ಬೆಲೆಯಲ್ಲಿ ಇದು ದೊರೆಯುತ್ತದೆ. ಸುಲಭವಾಗಿ ಪಾರ್ಕಿಂಗ್ ಕೂಡ ಮಾಡಬಹುದಾಗಿದೆ ಎಂದು ವಿವರಿಸಲಾಗಿದೆ.
Click 👇