ನ್ಯೂಸ್ ನಾಟೌಟ್: ಹನ್ನೆರಡು ನಕ್ಸಲರು ಗುರುವಾರ(ಎ.11) ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗಬೂಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಈ ಮಾವೋವಾದಿಗಳು ಸಾರಾಂಡ ಮತ್ತು ಕೊಲ್ಹಾನ್ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಭದ್ರತಾ ಸಿಬ್ಬಂದಿಯ ಮುಂದೆ ಶರಣಾಗಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಸುಳಿವು ನೀಡಿದವರಿಗೆ ಅಥವಾ ಹಿಡಿದು ಕೊಟ್ಟವರಿಗೆ ಸರ್ಕಾರ ₹ 1ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಪಶ್ಚಿಮ ಸಿಂಗಬೂಂ ಜಿಲ್ಲೆ ನಕ್ಸಲ್ ಪೀಡಿತ ಜಿಲ್ಲೆ ಎಂದೇ ಪರಿಗಣಿಸಲಾಗಿದ್ದು, ಅಲ್ಲಿನ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ ಈ ಮೊತ್ತದ ಬಹುಮಾನ ಘೋಷಿಸಿತ್ತು ಎನ್ನಲಾಗಿದೆ.