ನ್ಯೂಸ್ ನಾಟೌಟ್: ಕರ್ಕಶ ಹಾರ್ನ್ ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಚಲಿಸುತ್ತಾ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ವಾಹನ ಸವಾರರಿಗೆ ಮಂಗಳೂರಿನ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ACP ನಜ್ಮಾ ಫಾರೂಕಿ ನೇತೃತ್ವದಲ್ಲಿ ತಂಡ ಫೀಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸಿದೆ. ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆದಿದೆ. ಮಂಗಳೂರು ನಗರ ವ್ಯಾಪ್ತಿಯ ವಿವಿಧ ಸ್ಟೇಷನ್ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬಸ್ , ಟ್ರಕ್, ಲಾರಿಗಳ ಕರ್ಕಶ ಹಾರ್ನ್ ಗಳನ್ನು ಕಿತ್ತೆಸೆದು ದಂಡ ವಿಧಿಸಲಾಗುತ್ತಿದೆ.