ನ್ಯೂಸ್ ನಾಟೌಟ್ : ದೇವಸ್ಥಾನದ ಉತ್ಸವ ಅಂದ್ರೆ ಅಲ್ಲಿ ಸಂಭ್ರಮ ಕಳೆಗಟ್ಟುತ್ತೆ. ಸಾವಿರಾರು ಮಂದಿ ಭಕ್ತರು ಈ ದೃಶ್ಯ ನೋಡಿ ಪುಳಕಿತರಾಗುತ್ತಾರೆ.ಅದರಲ್ಲೂ ಆನೆಗಳು ಆ ಉತ್ಸವದಲ್ಲಿ ಇದ್ರೆ ಅದರ ವರ್ಚಸ್ಸೇ ಬೇರೆ ರೀತಿ ಇರುತ್ತೆ. ಆದರೆ ಇಲ್ಲೊಂದು ಕಡೆ ದೇಗುಲದ ಉತ್ಸವವೊಂದರಲ್ಲಿ ಪಾಲ್ಗೊಂಡ ಆನೆಗಳು ಏನು ಮಾಡಿದ್ದಾವೆ ನೋಡಿ..
ಮೆರವಣಿಗೆ ನಡೆಯುತ್ತಿರುವ ವೇಳೆ ದೇವರನ್ನು ಹೊತ್ತ ಆನೆಯೊಂದು ರೊಚ್ಚಿಗೆದ್ದು ಜೊತೆಗಿದ್ದ ಇನ್ನೊಂದು ಆನೆಯ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.ಶುಕ್ರವಾರ ತ್ರಿಶೂರ್ನ ತರಕ್ಕಲ್ ದೇವಸ್ಥಾನದ ಉತ್ಸವದ ನಡೆಯುತ್ತಿದ್ದ ವೇಳೆ, ‘ಅಮ್ಮತಿರುವಾಡಿ’ ದೇವರ ಮೆರವಣಿಗೆಯಲ್ಲಿ ಗುರುವಾಯೂರ್ ರವಿಕೃಷ್ಣನ್ ಎಂಬ ಆನೆ ಇನ್ನೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನ್ ನಡುವೆ ಕಾದಾಟ ನಡೆದಿದೆ.
ಈ ವೇಳೆ ಆನೆಯ ಮಾವುತ ಶ್ರೀಕುಮಾರ್ (53) ಮೂರು ಬಾರಿ ದಾಳಿಯಿಂದ ಪಾರಾಗಿದ್ದರೂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಕೂರ್ಕೆಂಚೇರಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಅಷ್ಟುಮಾತ್ರವಲ್ಲದೆ. ಮೆರವಣಿಗೆ ಮೊದಲು ನೆರೆದಿದ್ದ ಜನರು ಭಯದಿಂದ ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ.ಕಾದಾಟ ನಡೆಸುತ್ತಿದ್ದ ಆನೆಗಳನ್ನು ಶಾಂತಗೊಳಿಸಲು ಸುಮಾರು ಒಂದು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು ಎಂದು ಹೇಳಲಾಗಿದೆ.
ಆನೆಗಳ ಕಾದಾಟ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ದೇವಳದ ಉತ್ಸವ ಕಾರ್ಯಕ್ರಮ ನಡೆಸುವ ವೇಳೆ ಆನೆಗಳನ್ನು ಬಳಸುವುದಾದರೆ ಹೆಚ್ಚಿನ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ದೇವಳದ ಆಡಳಿತ ಮಂಡಳಿ ನಿರ್ಧರಿಸಿದೆ, ಅಲ್ಲದೆ ಭಕ್ತರ ಹಿತದೃಷ್ಟಿಯಿಂದ ಮುಂಜಾಗ್ರತಾ ವಹಿಸುವುದು ಸೂಕ್ತ ಎಂದು ಆಡಳಿತ ಮಂಡಳಿ ನಿರ್ಧಾರಕ್ಕೆ ಬಂದಿದೆ.