ನ್ಯೂಸ್ ನಾಟೌಟ್ : ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಪಾಠ ಮಾಡಿದ್ದಾರೆ ಎಂಬ ಆರೋಪ ಸಂತ ಜೆರೊಸಾ ಶಾಲೆಯ ಶಿಕ್ಷಕ ಕೇಳಿ ಬಂದಿದೆ.
ಈ ಹಿನ್ನೆಲೆ ಇಂದು(ಫೆ.10) ಹಿಂದೂ ಸಂಘಟನೆಗಳು ಶಾಲೆಯ ಮುಂಭಾದ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಪೋಷಕರು ಸಹ ಶಾಲೆಗೆ ಆಗಮಿಸಿ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಸ್ಟರ್ ಪ್ರಭಾ ಪಾಠ ಮಾಡುವ ಸಂಧರ್ಭದಲ್ಲಿ ಶ್ರೀರಾಮನ ಬಗ್ಗೆ ಮಕ್ಕಳಿಗೆ ಅವಹೇಳನದ ಪಾಠ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಶ್ರೀರಾಮ ಕಲ್ಲು, ಕಲ್ಲಿಗೆ ಪೂಜೆ ಏಕೆ ಮಾಡುತ್ತೀರಿ? ಹಿಂದೂ ಧರ್ಮಕ್ಕೆ ದಿಕ್ಕು ದೆಸೆಯಿಲ್ಲ. ಮೋದಿಯನ್ನೂ ದೂರಿದ್ದಾರೆ ಎನ್ನಲಾಗಿದೆ. ಮಕ್ಕಳು ಈ ವಿಷಯವನ್ನು ಪೋಷಕರಿಗೆ ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ. ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಶಾಲೆಯ ಎದುರು ಸೇರಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಸಿಸ್ಟರ್ ಪ್ರಭಾ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಇತ್ತ ಶಾಲೆಗೆ ನೀಡಿದ್ದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಕಾರಿಗೆ ಹಿಂದೂ ಸಂಘಟನೆಯವರು ಮುತ್ತಿಗೆ ಹಾಕಿ, ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದರು ಎನ್ನಲಾಗಿದೆ.