ನ್ಯೂಸ್ ನಾಟೌಟ್: ವಿವಾದಗಳ ಮೂಲಕವೇ ಹೆಸರು ಮಾಡಿರುವ ಪೂನಂ ಪಾಂಡೆ (Poonam Pandey) ಈಗ ಬಹುತೇಕರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಫೆಬ್ರವರಿ 2ರಂದು ಪೂನಂ ಪಾಂಡೆ ಕ್ಯಾನ್ಸರ್ನಿಂದ ಕೊನೆಯುಸಿರೆಳೆದರು ಎಂದು ಸುಳ್ಳು ಸುದ್ದಿ ಹರಡಿಸಲಾಗಿತ್ತು. ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದಲೇ ಈ ಬ್ರೇಕಿಂಗ್ ನ್ಯೂಸ್ ನೀಡಲಾಗಿತ್ತು. ಆದರೆ ಮರುದಿನ ಅದು ಫೇಕ್ ನ್ಯೂಸ್ ಎಂಬುದು ಸ್ಪಷ್ಟವಾಯ್ತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ತಮ್ಮ ಬಗ್ಗೆಯೇ ಸುಳ್ಳು ಸುದ್ದಿ ಹಬ್ಬಿಸಿಕೊಂಡ ಆಕೆಯ ವಿರುದ್ಧ ಮತ್ತು ‘ಪೂನಂ ಪಾಂಡೆ ಕೊನೆಯುಸಿರೆಳೆದ ಬಗ್ಗೆ ಫೇಕ್ ನ್ಯೂಸ್ ಹಬ್ಬಲು ಕಾರಣವಾದ ಎಲ್ಲರ ವಿರುದ್ಧ ತನಿಖೆ ನಡೆಸಿ, ಎಫ್ಐಆರ್ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅನೇಕ ಸೆಲೆಬ್ರಿಟಿಗಳು ಕೂಡ ಪೂನಂ ಪಾಂಡೆ ಅವರ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಕರಣದ ಬಗ್ಗೆ ಚರ್ಚೆ ಹೆಚ್ಚಾಗಿದೆ.
ಮುಂಬೈನಲ್ಲಿ ಪತ್ರಕರ್ತರೊಬ್ಬರು ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದ್ದಾರೆ. ‘ಪೂನಂ ಪಾಂಡೆ ಅವರ ಇನ್ನಿಲ್ಲ ಎಂಬ ಕುರಿತು ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧವೂ ಎಫ್ಐಆರ್ ದಾಖಲಿಸಿ. ಇಂತಹ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗರ್ಭಕಂಠದ ಕ್ಯಾನ್ಸರ್ನಿಂದ ಪೂನಂ ಪಾಂಡೆ ಕೊನೆಯುಸಿರೆಳೆದರು ಎಂಬ ಸುಳ್ಳು ಸುದ್ದಿ ಮಿಂಚಿನ ವೇಗದಲ್ಲಿ ಹರಡಿತು. ಅವರ ಅಭಿಮಾನಿಗಳಿಗೆ ಇದು ಆತಂಕ ಮೂಡಿಸಿತು. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಅನೇಕರು ಶ್ರದ್ಧಾಂಜಲಿ ಅರ್ಪಿಸಿದರು. ಆದರೆ ಇದೆಲ್ಲವೂ ಪ್ರಚಾರಕ್ಕಾಗಿ ಮಾಡಿದ್ದು ಎಂಬುದು ಗೊತ್ತಾದಾಗ ಎಲ್ಲರು ತಿರುಗಿ ಬಿದ್ದಿದ್ದಾರೆ.