ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಲಮಗನಿಗೆ ಹೇಗೆ ತಾರತಮ್ಯ ಮಾಡುತ್ತಿದ್ದಾಳೆ, ಅವಳ ಇಬ್ಬರು ನಿಜವಾದ ಪುತ್ರರನ್ನು ಹೇಗೆ ಪ್ರೀತಿಸುತ್ತಾಳೆ ಎಂಬ ಸಂಗತಿಯನ್ನು ಫೋಟೋ ಅಪ್ ಲೋಡ್ ಮಾಡುವ ಮೂಲಕ ಗೊತ್ತಾಗಿದೆ.ಸದ್ಯ ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.ಮಲಮಗನನ್ನು ಈ ರೀತಿ ಟ್ರೀಟ್ ಮಾಡೋದು ಸರಿಯಲ್ಲ ಎಂದು ಕ್ಲಾಸ್ ತಕೊಂಡಿದ್ದಾರೆ.
ಮಹಿಳೆ ಫೇಸ್ ಬುಕ್ (Facebook) ನಲ್ಲಿ ಪೋಸ್ಟ್ (Post) ಒಂದನ್ನು ಶೇರ್ ಮಾಡಿದ್ದಾಳೆ. ಇದರಲ್ಲಿ ಆಕೆಯ ಮಡಿಲಲ್ಲಿ ಸುಮಾರು ಒಂದು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿರೋದನ್ನು ನೀವು ನೋಡ್ಬಹುದು.ಈ ಫೋಟೋ (Photo) ದಲ್ಲಿ ನೀವು ಇನ್ನೊಂದು ಮಗುವನ್ನು ಕೂಡ ನೋಡಬಹುದು. ಸುಮಾರು ಎರಡೂವರೆ ವರ್ಷದ ಮೂರನೇ ಮಗು,ಮಹಿಳೆಯಿಂದ ಒಂದು ಅಡಿ ದೂರದಲ್ಲಿ ಕುಳಿತಿತ್ತು.
ಬಲಭಾಗದಲ್ಲಿ ಕುಳಿತಿರುವ ಮಗುವನ್ನು ತೆಗೆಯಲು ನಿಮ್ಮಲ್ಲಿ ಯಾರ ಬಳಿಯಾದ್ರೂ ಮಾರ್ಗವಿದ್ಯಾ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ. ಆತ ನನ್ನ ಮಲಮಗ. ನನಗೆ ಈ ಫೋಟೋ ತುಂಬಾ ಇಷ್ಟವಾಗಿದೆ. ಆದ್ರೆ ನನ್ನಿಬ್ಬರು ಮಕ್ಕಳ ಜೊತೆ ನಾನಿರುವ ಫೋಟೋ ಮಾತ್ರ ನನಗೆ ಇಷ್ಟವಾಗಿದೆ. ದಯವಿಟ್ಟು ಈತನನ್ನು ಫೋಟೋಗಳಿಂದ ತೆಗೆದುಹಾಕಿ. ಮುಂಚಿತವಾಗಿ ಧನ್ಯವಾದಗಳು ಎಂದು ಆಕೆ ಪೋಸ್ಟ್ ಮಾಡಿದ್ದಾಳೆ.ಮಹಿಳೆಯ ಈ ಪೋಸ್ಟ್ ನೋಡಿ ಜನರು ಕೋಪಗೊಂಡಿದ್ದಾರೆ.
ಒಂದಾದ್ಮೇಲೆ ಒಂದರಂತೆ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಯಾರೋ ಈ ಪೋಸ್ಟನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಅನೇಕ ಕಮೆಂಟ್ ಬಂದಿದೆ. ಮಹಿಳೆಯ ಬೇಧ ಭಾವವನ್ನು ಜನರು ಖಂಡಿಸಿದ್ದಾರೆ. ಮಲ ಮಗುವನ್ನು ಮಹಿಳೆ ಎಷ್ಟು ದೂರ ಇಟ್ಟಿದ್ದಾಳೆ ಎಂಬುದರಿಂದಲೇ ಮಹಿಳೆ ಮನಸ್ಥಿತಿಯನ್ನು ಅರಿಯಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಈ ಫೋಟೋ ಕ್ಲಿಕ್ ಮಾಡುವ ವೇಳೆ ಮಹಿಳೆ ಉದ್ದೇಶಪೂರ್ವಕವಾಗಿಯೇ ಮಲ ಮಗನನ್ನು ದೂರ ಇಟ್ಟಿದ್ದಾಳೆ. ಆರಾಮವಾಗಿಯೇ ಫೋಟೋ ಕ್ರಾಪ್ ಮಾಡಬಹುದು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಂಥ ಮಹಿಳೆ ಬಳಿ ಒಂದು ಮಗುವನ್ನೂ ಬಿಡಬಾರದು. ಮಹಿಳೆ ಮನಸ್ಥಿತಿ ಕೆಟ್ಟದಾಗಿದೆ. ಇದ್ರಿಂದ ನೋವಾಗುತ್ತದೆ. ಈ ಮಗು ಮುಂದಿನ ಜೀವನವನ್ನು ಹೇಗೆ ನಡೆಸ್ತಾನೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಎಲ್ಲ ಕಮೆಂಟ್ ಬಂದ್ಮೇಲೆ ಮಹಿಳೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾಳೆ. ನಾನು ನನ್ನ ಮಲ ಮಗನನ್ನೂ ಪ್ರೀತಿ ಮಾಡ್ತೇನೆ. ಆದ್ರೆ ಮಲಮಗನನ್ನು ಬಿಟ್ಟು ಕೆಲ ಫೋಟೋಗಳನ್ನು ನಾನು ಕ್ಲಿಕ್ ಮಾಡಿಕೊಳ್ಳಬೇಕಿತ್ತು. ಆತ ಜೊತೆಗಿರುವ ಕೆಲ ಫೋಟೋಗಳನ್ನು ನಾನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದೇನೆ ಎಂದು ಆಕೆ ಬರೆದಿದ್ದಾಳೆ.