ನ್ಯೂಸ್ ನಾಟೌಟ್ : ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ತಿರುಮಲದಲ್ಲಿ ಚಿರತೆ ಮತ್ತು ಕರಡಿಗಳು ಮತ್ತೆ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿವೆ.
ಕ್ಯಾಮೆರಾಗಳಲ್ಲಿ ಚಿರತೆ ಮತ್ತು ಕರಡಿ ಚಲನವಲನಗಳು ಸೆರೆಹಿಡಿಯಲಾಗಿದ್ದು, ಕಳೆದ ತಿಂಗಳಲ್ಲಿ ಎರಡು ದಿನಗಳ ಕಾಲ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿಗಳ ಚಲನವಲನಗಳು ದಾಖಲಾಗಿವೆ. ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಹಾಕಲಾಗಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಹುಲಿ ಚಲನವಲನ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಡಿಸೆಂಬರ್ 13 ಮತ್ತು 29 ರಂದು ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿ ಚಲನವಲನಗಳು ಕಂಡು ಬಂದಿವೆ. ಇದರಿಂದ ಎಚ್ಚೆತ್ತಿರುವ ಟಿಟಿಡಿ ನಡಿಗೆದಾರಿಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರಿಗೆ ಕೆಲ ಸೂಚನೆಗಳನ್ನು ನೀಡಿದೆ. ‘ಭಕ್ತರು ಜಾಗೃತರಾಗಿರಿ.. ಗುಂಪು ಗುಂಪಾಗಿ ತೆರಳಿ’ ಎಂದು ಮನವಿ ಮಾಡಿದೆ.
ಈ ಹಿಂದೆ ಅಲಿಪಿರಿ ಫುಟ್ಪಾತ್ನಲ್ಲಿ ಚಿರತೆಗಳು ಸಂಚರಿಸಿ ಬಾಲಕನ ಮೇಲೆ ದಾಳಿ ಮಾಡಿತ್ತು. ನೆಲ್ಲೂರು ಜಿಲ್ಲೆಯ ಕೋವೂರು ಮೂಲದ ಬಾಲಕಿಯ ಮೇಲೆ ದಾಳಿ ಮಾಡಿದ್ದವು. ಬಳಿಕ ಟಿಟಿಡಿ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿ ಬಲೆ ಹಾಕಿ ಐದು ಚಿರತೆ ಸೆರೆ ಹಿಡಿದಿದ್ದರು ಎನ್ನಲಾಗಿದೆ. ಈಗ ಮತ್ತೆ ಕಾಣಿಸಿಕೊಂಡಿವೆ.
ಇದಾದ ಬಳಿಕ ಚಿರತೆ ಭೀತಿ ಇರಲಿಲ್ಲ. ಚಿರತೆ ಕಾಟ ಇನ್ನಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭಾವಿಸಿದ್ದರು. ಆದರೆ ಇತ್ತೀಚೆಗೆ ಮತ್ತೊಂದು ಚಿರತೆ, ಕರಡಿ ಓಡಾಡುತ್ತಿರುವುದು ಕಂಡು ಬಂದಿದ್ದು, ಭಕ್ತರಲ್ಲಿ ಭೀತಿ ಹುಟ್ಟಿಸಿದೆ. ಈಗಾಗಲೇ ನಡಿಗೆ ಮಾರ್ಗದಲ್ಲಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ.ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸುರಕ್ಷತೆಗಾಗಿ ಟಿಟಿಡಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ರಾತ್ರಿ 10 ಗಂಟೆಯ ನಂತರ ಅಲಿಪಿರಿ ನಡಿಗೆ ಮಾರ್ಗದಲ್ಲಿ ಭಕ್ತರಿಗೆ ಪ್ರವೇಶವಿಲ್ಲ. ಬೆಳಿಗ್ಗೆ 6 ಗಂಟೆಯ ನಂತರವೇ ಪಾದಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, ಮಧ್ಯಾಹ್ನ 2 ಗಂಟೆಯ ನಂತರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಾಕ್ವೇನಲ್ಲಿ ಅನುಮತಿಸಲಾಗುವುದಿಲ್ಲ ಎನ್ನಲಾಗಿದೆ.