ನ್ಯೂಸ್ ನಾಟೌಟ್ : ಕಳೆದ ಎರಡು ದಿನಗಳಿಂದ ಸೂರತ್ ನ ಗಾಂಧಿ ಗ್ರಂಥಾಲಯದ ಬಳಿ ಭಿಕ್ಷುಕನೊಬ್ಬ ರಸ್ತೆಬದಿ ಬಿದ್ದಿರುವುದನ್ನು ಅಂಗಡಿ ಮಾಲೀಕರು ಗಮನಿಸಿ, 108ಕ್ಕೆ ಕರೆ ಮಾಡಿ ವೃದ್ಧಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಿಕ್ಷುಕ ಕೊನೆಯುಸೊರೆಳೆದಿದ್ದಾನೆ.
ಕಳೆದ ಎರಡು ದಿನಗಳಿಂದ ಏನನ್ನೂ ತಿನ್ನದೇ ಹಸಿವಿನಿಂದ ಅಸುನೀಗಿದ್ದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಈತನ ಉಸಿರು ನಿಲ್ಲಿಸಿದ ಬಗ್ಗೆ ಪೊಲೀಸರಿಗೆ ಹಲವು ಅನುಮಾನಗಳು ಉಂಟಾಗದೆ. ತನಿಖೆಯ ವೇಳೆ ಭಿಕ್ಷುಕನ ಜೇಬಿನಲ್ಲಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ, ಇಷ್ಟು ಹಣವಿದ್ದರೂ ಹಸಿವಿನಿಂದ ಕೊನೆಯುಸಿರೆಳೆಯಲು ಕಾರಣವೇನು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ.
ತುರ್ತು ವೈದ್ಯಕೀಯ ವಿಭಾಗದ ಸಿಬ್ಬಂದಿ ಹೇಳುವಂತೆ ‘ ಮೃತ ಭಿಕ್ಷುಕ ಗುಜರಾತಿ ಮಾತನಾಡುತ್ತಿದ್ದರು, ಕಳೆದ ಎರಡು ದಿನಗಳಿಂದ ಯಾವುದೇ ಚಲನವಲನ ಇಲ್ಲದ ಕಾರಣ ಪಕ್ಕದ ಅಂಗಡಿಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಭಿಕ್ಷುಕ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ಪರೀಕ್ಷೆಯ ನಂತರ ಅವರನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಾಗ ಭಿಕ್ಷುಕನ ಬಳಿ ರೂ.1.14 ಲಕ್ಷ ನಗದು ಪತ್ತೆಯಾಗಿದೆ. 10- 20ರೂಪಾಯಿಯಿಂದ ಹಿಡಿದು ಸಾಕಷ್ಟು ನೋಟುಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಪ್ಯಾಂಟ್ ಜೇಬಿನಲ್ಲಿ ಇರಿಸಲಾಗಿತ್ತು. ಈ ಹಣವನ್ನು ವಲ್ಸಾದ್ ಪಟ್ಟಣದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ವರದಿ ತಿಳಿಸಿದೆ.
ವರದಿಗಳ ಪ್ರಕಾರ,ವೃದ್ಧನನ್ನು ಆಸ್ಪತ್ರೆಗೆ ಕರೆತಂದಾಗ ಚಹಾ ಕೊಡಿ ಎಂದು ಕೇಳಿದರು. ಆತ ಹಸಿದ್ದಿದ್ದ ಮತ್ತು ಅವನ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗಿತ್ತು.ಆದರೆ ಒಂದು ಗಂಟೆಯ ನಂತರ ಭಿಕ್ಷುಕ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಆತನ ಫೋಟೋ ತೆಗೆದು ತನಿಖೆ ಆರಂಭಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.