ನ್ಯೂಸ್ ನಾಟೌಟ್: 6 ಜನರ ಭಿಕ್ಷುಕರು ಕೋತಿಗಳನ್ನು ಕೊಂದು, ಅದರ ಮಾಂಸವನ್ನು ಬೇಯಿಸಿ ತಿಂದ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಚಿಂತಲ್ ಬೋರಿ ಎಂಬ ಗ್ರಾಮದಲ್ಲಿ ನಡೆದಿದೆ.
ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಭೈಂಸಾ ಮಂಡಲದ ಚಿಂತಲ್ ಬೋರಿ ಎಂಬಲ್ಲಿ ಕಳೆದ ಮೂರು ದಿನಗಳಿಂದ 6 ಜನರು ಭಿಕ್ಷಾಟನೆ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಗ್ರಾಮದ ಬಳಿಕ ನಾಲ್ಕು ಮಂಗಗಳನ್ನು ಕೊಂದು, ಬೇಯಿಸಿ ತಿಂದಿದ್ದಾರೆ ಎನ್ನಲಾಗಿದೆ. ಮಾಂಸವನ್ನು ಬೇಯಿಸುವ ವೇಳೆ ಅವರಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಆಗ ಸಿಟ್ಟಾದ ಓರ್ವ ಈ ಬಗ್ಗೆ ಗ್ರಾಮದ ಜನರಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅದರಂತೆ ಓರ್ವ ಭಿಕ್ಷುಕ ಗ್ರಾಮಕ್ಕೆ ತೆರಳಿ ಮಂಗಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ವೀಕ್ಷಿಸಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರನ್ನು ಕಂಡ ಭಿಕ್ಷುಕರಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಇನ್ನಿಬ್ಬರು ಸ್ಥಳದಲ್ಲೇ ಸಿಕ್ಕಿದ್ದರು ಎನ್ನಲಾಗಿದೆ. ವಿಚಾರಣೆ ನಡೆಸಿದ ವೇಳೆ ತಾವೇ ಮಂಗಗಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಗ್ರಾಮಸ್ಥರ ಕಾಲಿಗೆ ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.
ಜನರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಭಿಕ್ಷುಕರು ನಾಲ್ಕು ಕೋತಿಗಳನ್ನು ಹತ್ಯೆ ಮಾಡಿ ಬೇಯಿಸಿದ್ದು ಕಂಡುಬಂದಿದೆ. ಮಂಗಗಳ ಕೈ, ಕಾಲು, ತಲೆಯನ್ನು ಬೇಯಿಸಿದ್ದರು. ಬಳಿಕ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರು ಮಂದಿಯಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ವರದಿ ತಿಳಿಸಿದೆ.