ನ್ಯೂಸ್ ನಾಟೌಟ್ : ಗಂಡನ ವಿರುದ್ಧ ಸೇಡು ತೀರಿಸಲು ಆತನ ಮೊಬೈಲ್ ಫೋನಿನಿಂದ ಬಾಂಬ್ ಬೆದ* ರಿಕೆ ಸಂದೇಶ ಕಳುಹಿಸಿದ 32 ವರ್ಷದ ಮಹಿಳೆಯ ವಿರುದ್ಧ ನಗರದ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಕೆ ಈ ವಿಚಾರವನ್ನು ತನ್ನ ಬಿಹಾರ ಮೂಲದ ಸ್ನೇಹಿತನಿಗೆ ತಿಳಿಸಿದಾಗ, ಮಹಿಳೆಯ ಗಂಡನನ್ನು ಸಿಲುಕಿಸಿ ಹಾಕಲು ಆಕೆ ತನ್ನ ಮತ್ತೊಬ್ಬ ಸ್ನೇಹಿತನೊಂದಿಗೆ ಒಂದು ಯೋಜನೆ ರೂಪಿಸಿದ್ದಳು.
ಮಹಿಳೆ ಮತ್ತೊಂದು ಫೋನ್ ಖರೀದಿಸಿದ ನಂತರ ಆಕೆಯ ಸ್ನೇಹಿತ ಆಕೆಯ ಫೋನಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮತ್ತು ಅದನ್ನು ಆಕೆಯ ಗಂಡನ ಫೋನ್ನಿಂದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಳಿಸುವಂತೆ ಸೂಚಿಸಿದ ಎನ್ನಲಾಗಿದೆ.
ಆರೋಪಿ ಮಹಿಳೆಯನ್ನು ವಿಧ್ಯಾರಾಣಿ ಎಂದು ಗುರುತಿಸಲಾಗಿದೆ. ಆನ್ಲೈನ್ ಮೂಲಕ ಸಂಪರ್ಕ ನಡೆಸಿದ್ದ ಪುರುಷರೊಂದಿಗೆ ನಡೆಸಿದ ಸಂಭಾಷಣೆಗಳನ್ನು ಗಂಡ ನೋಡಿ ಆಕೆಯ ಗಂಡ ಆಕೆಯ ಫೋನ್ ಮುರಿದು ಹಾಕಿದ್ದನೆಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾಳೆ. ಈ ಕೇಸ್ ಬಗೆಹರಿಸಿದ ಪೊಲೀಸರು ಆಕೆಯನ್ನು ಹೆಡೆಮುರಿ ಕಟ್ಟಿದ್ದಾರೆ.