ನ್ಯೂಸ್ ನಾಟೌಟ್: ಉಪ್ಪಿನಂಗಡಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅನುಮಾನಗೊಂಡ ಮೂವರನ್ನು ವಿಚಾರಿಸಿದಾಗ ಸ್ಫೋಟಕ ವಿಚಾರವೊಂದು ಬಯಲಾಗಿದೆ. ಸದ್ಯ ಮೂವರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸೋಮವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಪೊಲೀಸರು ಎಂದಿನಂತೆ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಈ ವೇಳೆ ಉಪ್ಪಿನಂಗಡಿ ಹೋಟೆಲ್ ವೊಂದರ ಎದುರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ KA-21-Z-1864 ವಾಹನವೊಂದು ಬರುತ್ತದೆ. ಅನುಮಾನಗೊಂಡ ಪೊಲೀಸರು ಕಾರನ್ನು ನಿಲ್ಲಿಸುವಂತೆ ಸೂಚಿಸುತ್ತಾರೆ. ಆದರೆ ಆತ ಸ್ವಲ್ಪ ಮುಂದೆ ಹೋಗಿ ಕಾರನ್ನು ನಿಲ್ಲಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾರೆ. ಈ ವೇಳೆ ಬೆಳ್ತಂಗಡಿಯ ಉರುವಾಲು ಸುಶೃತ ಕೃಷ್ಣ ಜೆ.ಕೆ (32), ಬೆಳ್ತಂಗಡಿ ನೆರಿಯ ಗ್ರಾಮದ ಸೆಬಾಸ್ಟಿಯನ್ (31), ಕೇರಳ ಇಡುಕಿ ಜಿಲ್ಲೆ ವನ್ನಪುರಂ ಗ್ರಾಮ ಅನಿಲ್ ತೋಮಸ್ (31) ಅವರನ್ನು ಪೊಲೀಸರು ಹಿಡಿದು ವಿಚಾರಿಸಿದ್ದಾರೆ. ಮಾತ್ರವಲ್ಲ ಅನುಮಾನಗೊಂಡು ವಾಹವನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ವಾಹನದೊಳಗೆ ರೂ 45.000 ಮೌಲ್ಯದ 22.4 ಮಿಲಿ ಗ್ರಾಂ ತೂಕದ ಎಂ ಡಿ ಎಂ ಎ ಎಂಬ ಮಾದಕ ವಸ್ತು ಪತ್ತೆಯಾಗಿದೆ. ಮುಂದಿನ ಕಾನೂನುಕ್ರಮಕ್ಕಾಗಿ ಆರೋಪಿಗಳೊಂದಿಗೆ, ಸದರಿ ಮಾದಕವಸ್ತು, ಆರೋಪಿಗಳ ಬಳಿಯಿದ್ದ 3 ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 162/2023 ಕಲಂ: U/s-8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ r/w 34 ipc ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ತನಿಖೆ ನಡೆಸಲಾಗುತ್ತಿದೆ.