ನ್ಯೂಸ್ ನಾಟೌಟ್ : ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.ಅಕ್ರಮ ಮದ್ಯ ವಶಕ್ಕೆ ಪಡೆದಿದ್ದ ಪೊಲೀಸರು ಅವುಗಳನ್ನು ಪೊಲೀಸ್ ಠಾಣೆಯಲ್ಲೇ ತಂದು ಇರಿಸಿದ್ದರು, ಆದರೆ ದಿಢೀರ್ ಮದ್ಯದ ಬಾಟಲಿಗಳು ಖಾಲಿಯದ ಘಟನೆ ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ವಶದಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಕುಡಿದು ಖಾಲಿ ಮಾಡಿದ ಆರೋಪದ ಮೇಲೆ ಇಲಿಯೊಂದನ್ನು ಹಿಡಿದು ಬೋನಿನೊಳಗೆ ಹಾಕಿರುವ ಪೊಲೀಸರ ನಡೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.
ಇಲಿಗಳ ಕಾಟದಿಂದ ಕೆಲವೊಮ್ಮೆ ಪೇಪರ್ ಹಾಗೂ ಕೆಲ ದಾಖಲೆಗಳು ನಾಶವಾಗುವುದುಂಟು. ಆದರೆ ಇಲ್ಲಿ ಮದ್ಯದ ಬಾಟಲಿಯಲ್ಲಿದ್ದ ಮದ್ಯವೇ ಖಾಲಿಯಾಗಿದೆ ಮತ್ತು ಈ ಆರೋಪವನ್ನು ಇಲಿಗಳ ಮೇಲೆ ಪೊಲೀಸರೆ ಹೊರಿಸಿದ್ದಾರೆ.
ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಯಲ್ಲಿ ಇಟ್ಟಿದ್ದರು. 60 ಮದ್ಯದ ಪ್ಲ್ಟಾಸ್ಟಿಕ್ ಬಾಟಲಿಗಳನ್ನು ಚೀಲವೊಂದರಲ್ಲಿ ಕಟ್ಟಿ ಇಟ್ಟಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯದ್ದ ಕಾರಣ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಇದನ್ನು ಪೊಲೀಸರು ತೋರಿಸಬೇಕಿತ್ತು.
ಆದರೆ ಠಾಣೆ ಸ್ಟೋರ್ ರೂಮ್ ನಲ್ಲಿದ್ದ ಮದ್ಯದ ಬಾಟಲಿಗಳು ಖಾಲಿಯಾಗಿರುವುದನ್ನು ಪೊಲೀಸರ ಗಮನಕ್ಕೆ ಬಂದು ಅಚ್ಚರಿಗೊಂಡಿದ್ದಾರೆ.
ಇದರ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಇಲಿಯೊಂದು ಅಪರಾಧಿ ಎಂದು ತಿಳಿದಿದೆ ಎನ್ನಲಾಗಿದೆ. ಈ ಕಾರಣದಿಂದ ಮರುದಿನ ಇಲಿ(rat)ಯ ಹಿಡಿಯುವ ಬೋನು ತಂದು ಠಾಣೆಯಲ್ಲಿಟ್ಟಿದ್ದಾರೆ. ಇದರಲ್ಲಿ ಒಂದು ಇಲಿ ಬಂದು ಬಿದ್ದಿದೆ.
ಎಲ್ಲ ಮದ್ಯದ ಬಾಟಲಿಯಲ್ಲಿನ ಮದ್ಯವನ್ನು ಇಲಿಗಳೇ ಕುಡಿದು ಖಾಲಿ ಮಾಡಿವೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಉಳಿದ ‘ಇಲಿ’ಗಳನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.