ನ್ಯೂಸ್ ನಾಟೌಟ್: ದೇಶದೆಲ್ಲೆಡೆ ವಿಶ್ವಕಪ್ ಕ್ರೇಜ್ ಹಬ್ಬಿದ್ದು, ಹಲವರು ಬೆಟ್ಟಿಂಗ್ ಆ್ಯಪ್ ಗಳ ಮೂಲಕ ಮೊಬೈಲ್ನಲ್ಲಿಯೂ ಆಡುತ್ತಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೋಮನಾಥ್ ಝೆಂಡೆ ಎಂಬವರು ಈ ಆ್ಯಪ್ ಮೂಲಕ ಆಡಿ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಹಲವು ಬಾರಿ ಸೋತಿದ್ದ ಸೋಮನಾಥ್ ಝೆಂಡೆ ಈ ಬಾರಿ ಕೋಟಿ ಗೆದ್ದಿದ್ದು, ಪಿಎಸ್ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್ ಕ್ವಾರ್ಟರ್ಸ್ನಲ್ಲಿ ಆರ್ಸಿಪಿಯಲ್ಲಿ ನಿಯೋಜಿಸಲಾಗಿದೆ. ಕ್ರಿಕೆಟ್ನಲ್ಲಿ ಒಲವು ಹೊಂದಿರುವ ಕಾರಣ, ಅವರು ಆನ್ಲೈನ್ನಲ್ಲಿ ಗೇಮಿಂಗ್ಸ್ನಲ್ಲಿ ತಮ್ಮ ನೆಚ್ಚಿನ ತಂಡ ಆಯ್ಕೆ ಮಾಡಿ ಬಹುಮಾನ ಪಡೆದುಕೊಂಡಿದ್ದಾರೆ.
ನಿನ್ನೆ (ಅಕ್ಟೋಬರ್ 10ರಂದು) ಮಂಗಳವಾರವೂ ಕರ್ತವ್ಯದಲ್ಲಿರುವಾಗಲೇ ಗೇಮ್ಸ್ನಲ್ಲಿ ತಂಡವನ್ನು ಕಣಕ್ಕಿಳಿಸುವ ಮೂಲಕ ಬಾಂಗ್ಲಾದೇಶ ವರ್ಸಸ್ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಕೆಲವೇ ಸಮಯದಲ್ಲಿ, ಅವರ ತಂಡವು ನಂಬರ್ ಸ್ಥಾನ ಪಡೆದುಕೊಂಡಿದ್ದರಿಂದ ಅವರು ಬಹುಮಾನ ಪಡೆದಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಕ್ಕಿದ್ದು ಸೋಮನಾಥ್ ಝೆಂಡೆ ಕುಟುಂಬಕ್ಕೆ ತುಂಬಾ ಖುಷಿ ತಂದಿದೆ.
ಪಿಎಸ್ಐ ಸೋಮನಾಥ ಝೆಂಡೆ ಮಾತನಾಡಿ, ”ಕಳೆದ ಹಲವು ತಿಂಗಳಿಂದ ಬಿಡುವಿನ ವೇಳೆಯಲ್ಲಿ ಗೇಮ್ಸ್ನಲ್ಲಿ ನನ್ನ ಆಯ್ಕೆ ತಂಡವನ್ನು ಸೆಲೆಕ್ಟ್ ಮಾಡುತ್ತಿದ್ದೆ. ಆದರೆ, ನಾನು ಎಂದಿಗೂ ಯಶಸ್ವಿಯಾಗಿರಲಿಲ್ಲ.
ನಿನ್ನೆಯೂ ನಾನು ಕರ್ತವ್ಯದಲ್ಲಿದ್ದಾಗ ನಾನು ಆಟಕ್ಕಾಗಿ ತಂಡವನ್ನು ಕಣಕ್ಕಿಳಿಸಿದೆ. ಆ ತಂಡ ಮೇಲುಗೈ ಸಾಧಿಸಿತು. ಆರಂಭದಲ್ಲಿ ನನಗೆ ಒಂದೂವರೆ ಕೋಟಿ ಬಹುಮಾನ ಬಂದಿದೆ ಎಂಬ ಸಂದೇಶ ಬಂದಿದೆ. ನಾನು ಮೊದಲು ನಂಬಲಿಲ್ಲ. ಆದರೆ, ನನಗೆ ತಲಾ ಎರಡು ಲಕ್ಷ ರೂಪಾಯಿ ಸಿಗಲಾರಂಭಿಸಿದಾಗ ನನಗೆ ತುಂಬಾ ಖುಷಿಯಾಯಿತು” ಎಂದು ತಿಳಿಸಿದರು.
ಇದೊಂದು ಆನ್ಲೈನ್ ಆಟವಾಗಿದೆ. ಹೀಗಾಗಿ ಇಂತಹ ಆನ್ ಲೈನ್ ಗೇಮಿಂಗ್ ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವುದರ ಜೊತೆಗೆ ಇಲ್ಲಿ ಪೊಲೀಸ್ ಒಬ್ಬರು ಈ ಬೆಟ್ಟಿಂಗ್ ಆ್ಯಪ್ ಮೂಲಕ ಹಣ ಗಳಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.