ನ್ಯೂಸ್ ನಾಟೌಟ್ : ತನ್ನ ನಾಲ್ಕು ವರ್ಷದ ಮಗನ ಜೊತೆ ಐಸ್ಕ್ರೀಮ್ ತಿನ್ನಲು ಮನೆಯಿಂದ ಹೊರಗೆ ಹೋಗಿದ್ದ ತುಂಬು ಗರ್ಭಿಣಿಯ ಶವ ಮಹಾರಾಷ್ಟ್ರದ ವಾರ್ಧಾ ನದಿಯ ಸೇತುವೆ ಕಳೆಗಡೆ ಪತ್ತೆಯಾಗಿದೆ.
ಚಂದ್ರಪುರ ನಿವಾಸಿ ಸುಷ್ಮಾ ಅನ್ನುವ ಮಹಿಳೆ ತನ್ನ ಮಗ ದುರ್ವಂಶ್ ಜೊತೆ ಮಂಗಳವಾರ ರಾತ್ರಿ 9.30ಕ್ಕೆ ಮನೆಯಿಂದ ಹೊರಟಿದ್ದಳು. ಬಳ್ಳಾಪುರದ ಟೀಚರ್ಸ್ ಕಾಲೋನಿಯಿಂದ ಐಸ್ಕ್ರೀಂ ತರಲು ಹೋಗಿದ್ದಳು. ಮನೆಯಿಂದ ಹೊರಟು ಗಂಟೆಗಳೇ ಕಳೆದರೂ ತಾಯಿ-ಮಗ ಮನೆಗೆ ಬಂದಿರಲಿಲ್ಲ.
ಈಕೆಯ ಪತಿ ಪವನ್ ಕುಮಾರ್, ಕೆಲವು ಹೊತ್ತು ಸಂಬಂಧಿಕರ ಜೊತೆ ಹುಡುಕಾಟ ನಡೆಸಿದ್ದಾರೆ. ನಂತರ ಬಳ್ಳಾಪುರ ಠಾಣೆಗೆ ಬಂದು ದೂರು ನೀಡಿದ್ದರು ಎಂದು ಎಸ್ಪಿ ರವೀಂದ್ರ ಸಿಂಗ್ ಪರದೇಸಿ ತಿಳಿಸಿದ್ದಾರೆ.
ರಾತ್ರಿ ಇಡೀ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಮಾರನೇಯ ದಿನ ರಾಜುರ-ಬಳ್ಳಾಪುರ ಸೇತುವೆ ಕಳೆಗಡೆ ಶವವಾಗಿ ಬಿದ್ದಿರೋದು ಕಂಡುಬಂದಿದೆ. ಅಲ್ಲಿಗೆ ಪೊಲೀಸರು ಹೋಗಿ ನೋಡಿದಾಗ ಆಕೆಯ ಮಗ ಅಲ್ಲೇ ಕೂತಿದ್ದ. ಏನೂ ಮಾಡಲಾಗದ ಸ್ಥಿತಿಯಲ್ಲಿ ಅಮ್ಮನ ಮೃತದೇಹದ ಮುಂದೆ ಕೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯಲ್ಲಿ ತುಂಬಾ ಕೆಸರು ಇತ್ತು. ಕಾಲು ಜಾರಿ ಸೇತುವೆ ಕೆಳಗೆ ಬಿದ್ದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರುತನಿಖೆಯನ್ನು ಮುಂದುವರಿಸಿದ್ದಾರೆ.