ನ್ಯೂಸ್ ನಾಟೌಟ್: ಗೋವಿಂದ ಬಾಬು ಪೂಜಾರಿಗೆ ವಂಚನೆ ಕೇಸ್ನಲ್ಲಿ ಬಂಧನವಾಗಿರುವ ಆರೋಪಿ ಚೈತ್ರಾ ಕುಂದಾಪುರ (Chaitra Kundapura) ತಾಯಿ ಮಗಳ ಬಂಧನದ ಕುರಿತು ಮಾತನಾಡಿದ್ದು, ಬುಧವಾರ ಬೆಳಗ್ಗೆ ಮಗಳ ಬಂಧನದ ವಿಷಯ ಗೊತ್ತಾಯ್ತು. ಹಿರಿಯ ಪುತ್ರಿ ಕರೆ ಮಾಡಿ ಚೈತ್ರಾ ಬಂಧನವಾಗಿರುವ ವಿಷಯವನ್ನು ತಿಳಿಸಿದಳು ಎಂದಿದ್ದಾರೆ.
ಮಗಳು ಒಳ್ಳೆಯ ರೀತಿಯಲ್ಲಿದ್ದು, ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾಳೆ. ನಾವು ಕಾರ್ಯಕ್ರಮದ ಬಗ್ಗೆ ಏನು ಕೇಳುತ್ತಿರಲಿಲ್ಲ. ಮಗಳ ಬಂಧನ ಆಗಿರೋದಕ್ಕೆ ಬೇಜಾರು ಆಗುತ್ತೆ. ಯಾರ್ ಯಾರಿಗೋಸ್ಕರ ಇದು ಆಗಿದೆ ಗೊತ್ತಿಲ್ಲ. ನನ್ನ ಮಗಳು ಈ ರೀತಿ ಮೋಸ ಮಾಡುತ್ತಾಳೆ ಎಂದು ನನಗೆ ಅನ್ನಿಸಲ್ಲ ಎಂದಿದ್ದಾರೆ.
ಹಣದ ವಿಷಯಕ್ಕೆ ಅರೆಸ್ಟ್ ಆಗಿರೋದು, ನಾನು ಭಯ ಪಟ್ಟುಕೊಳ್ಳಬೇಡ ಎಂದಿದ್ದಳು. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೋ ಎಂದು ಹಿರಿಯ ಪುತ್ರಿ ಹೇಳಿದ್ದಳು ಎಂದು ಪ್ರತಿಕ್ರಯಿಸಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತೆ ಎಂದ ಚೈತ್ರಾ ಕುಂದಾಪುರ!
ನಂತರ ಪೊಲೀಸರೇ ಫೋನ್ ಮಾಡಿ ನೀವು ಚೈತ್ರಾ ಕುಂದಾಪುರ ತಾಯಿನಾ ಅಂತ ಕೇಳಿದರು. ಅದಕ್ಕೆ ನಾನು ಹೌದು ಎಂದು ಹೇಳಿದೆ. ಪೊಲೀಸರೇ ಮಗಳಿಗೆ ಫೋನ್ ನೀಡಿದರು. ಆಗ ಮಗಳು, ನೀನು ಏನು ಟೆನ್ಷನ್ ಮಾಡೋಕೋ ಬೇಡ, ಹಾಸನದಲ್ಲಿ ಆದ ರೀತಿ ಒಂದು ರೀತಿ ಸಣ್ಣ ಕೇಸ್ ಆಗಿದೆ. ಸರಿಯಾಗಿ ಔಷಧಿ ತೆಗೆದುಕೋ ಎಂದು ಹೇಳಿದಳು ಎಂದಿದ್ದಾರೆ.
ಅವಳು ಬೇರೆಯವರ ಹಣ ನುಂಗಿ ಹಾಕಬೇಕು ಅನ್ನೋ ಭಾವನೆಯವಳಲ್ಲ. ತನ್ನದೇ ದುಡ್ಡು ಹೋದ್ರೂ ಪರವಾಗಿಲ್ಲ ಅನ್ನೋ ಭಾವನೆಯವಳು. ಮಗಳು ಯಾವಾಗಲೂ ನೇರ ಮಾತಿನವಳು ಎಂದು ಪುತ್ರಿಯ ಬಗ್ಗೆ ಹೇಳಿದ್ದಾರೆ. ಮಗಳಿಗೆ ರಾಜಕೀಯದ ಆಸೆಯೂ ಇಲ್ಲ. ಈ ಪ್ರಕರಣದಲ್ಲಿ ಅವಳನ್ನು ಮುಂದೆ ಹಾಕಲಾಗಿದೆ. ಎಲ್ಲರೂ ಹಿಂದೆ ನಿಂತು ಚೈತ್ರಾಳನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.