ನ್ಯೂಸ್ ನಾಟೌಟ್ : ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದೆ.ಇಂದು ಬೆಳಗ್ಗೆ ನಿಧನ ವಾರ್ತೆಯನ್ನು ಕೇಳಿ ಆ ಗುಂಗಿನಿAದ ಹೊರಬರಲಾಗುತ್ತಿಲ್ಲ.ಇನ್ನು ಅಭಿಮಾನಿಗಳಂತು ಕಣ್ಣೀರು ಸುರಿಸುತ್ತಿದ್ದಾರೆ.
ಈ ಬೆನ್ನಲ್ಲೇ ರಾತ್ರಿ ಮಲಗಿದ್ದ ಸ್ಪಂದನಾ ಹಾಸಿಗೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಸದ್ಯ ಬ್ಯಾಂಕಾಕ್ ನಲ್ಲೇ ಸ್ಪಂದನ ಪಾರ್ಥೀವ ಶರೀರವಿದ್ದು, ನಾಳೆ ಸಂಜೆ ವೇಳೆಗೆ ಅಥವಾ ನಾಡಿದ್ದು ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸ್ಪಂದನಾ ನಗುಮೊಗದಿಂದ ಸದಾ ಇರುತ್ತಿದ್ದವರು.ಜತೆಗೆ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುತ್ತಿದ್ದವರಿಗೆ ಈ ರೀತಿಯ ಹೃದಯಾಘಾತ ಹೇಗೆ ಸಂಭವಿಸಿತು? ಎನ್ನುವ ಬಗ್ಗೆಯೂ ಪ್ರಶ್ನೆಗಳು ಕಾಡುತ್ತಿವೆ.ಮೂಲಗಳ ಪ್ರಕಾರ ಸ್ಪಂದನಾ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಸಕತ್ ಫ್ಯಾಟ್ ಆಗಿದ್ದ ಸ್ಪಂದನಾ ಸ್ಲಿಮ್ ಆಗಲು ಬಯಸಿದ್ದರು ಎಂದು ಹೇಳಲಾಗುತ್ತಿದೆ. ತೆಳ್ಳಗಾಗಲು ಸ್ಪಂದನಾ ಪರ್ಯಾಯ ಚಿಕಿತ್ಸೆ ಮೊರೆ ಹೋಗಿದ್ದರಾ ಎಂಬ ಪ್ರಶ್ನೆಯೂ ಸಹ ಸಹಜವಾಗಿ ಎದ್ದಿದೆ.ಈ ನಡುವೆ ಸ್ಪಂದನಾ 10 ಕೆಜಿ ಸಣ್ಣಗಾಗಿದ್ದರು ಎಂಬ ಮಾಹಿತಿಯೂ ಲಭಿಸಿದೆ.
ಸ್ಪಂದನಾ ಮತ್ತು ವಿಜಯ್ ಕೆಲ ವರ್ಷಗಳಿಂದ ಪ್ರೀತಿಸಿ, ೨೦೦೭ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು.ಬೆಳ್ತಂಗಡಿಯವರಾದ ಸ್ಪಂದನಾ ಅವರು ದಕ್ಷ ಪೊಲೀಸ್ ಅಧಿಕಾರಿಯ ಮಗಳು.ಅಣ್ಣ ರಕ್ಷಿತ್ ರಾಮ್ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿಯಾಗಿದ್ದರು.
ಇವರಿಗೆ ಶೌರ್ಯ ಎಂಬ ಒಬ್ಬ ಮಗನಿದ್ದಾನೆ.ಸ್ಪಂದನಾ 2006 ರಲ್ಲಿ ತೆರೆಕಂಡ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು, ಇದರ ಜೊತೆಗೆ ಸ್ಪಂದನಾ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು.
ವಿದೇಶಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಸ್ಪಂದನಾರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ಥೈಲ್ಯಾಂಡ್ ನಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ.ಪ್ರವಾಸದಲ್ಲಿದ್ದ ವೇಳೆ ಅವರಿಗೆ ಲೋ ಬಿಪಿ ಆಗಿ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ .