ನ್ಯೂಸ್ ನಾಟೌಟ್: 4 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಬಳಿಕ ಪಾತ್ರೆಯಿಂದ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ಮಗುವಿನ ಚೀರಾಟ ನೋಡಿದ ತಾಯಿ ಗಾಬರಿಗೊಂಡಿದ್ದಾರೆ. ಪಾತ್ರೆಯನ್ನು ತೆಗೆಯಲು ಪ್ರಯತ್ನಿಸಿ ವಿಫಲವಾದ ಘಟನೆ ತಮಿಳುನಾಡಿನ ತಿರುನೇಲ್ವೆಲ್ಲಿ ಎಂಬಲ್ಲಿ ನಡೆದಿದೆ.
ಬಳಿಕ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ದಳಗಳನ್ನು ಕರೆಯಿಸಿ ಯಶಸ್ವಿಯಾಗಿ ಪಾತ್ರೆ ತೆಗೆಯಲಾಗಿದೆ. ಆದರೆ ಈ ಕಾರ್ಯಾಚರಣೆ ವೇಳೆ ಅಡ್ಡಿಯಾಗದಿರಲು ಪೊಲೀಸರು ಮಗುವಿನ ಕೈಗೆ ಮೊಬೈಲ್ ನೀಡಿ ಕೂರಿಸಿದ್ದರು.
ಧಮಂತಲಯೂರು ಗ್ರಾಮದ ಸಿ ಮೈಕೆಲ್ ರಾಜ್ ಅವರ ಪುತ್ರ ನಾಲ್ಕು ವರ್ಷ ಕ್ಸೇವಿಯರ್ ಕಳೆದ ರಾತ್ರಿ ಆಟವಾಡುತ್ತಿದ್ದ.
ಕೆಲ ಪಾತ್ರೆಗಳನ್ನು ಇಟ್ಟು ಆಟದಲ್ಲಿ ಮಗ್ನನಾಗಿದ್ದ. ಮಕ್ಕಳಾಟಿಕೆಗಳಲ್ಲಿ ಆಟವಾಡುತ್ತಿದ್ದ ಕ್ಸೇವಿಯರ್ ಅಡುಗೆ ಕೋಣೆಯಿಂದ ಕೆಲವು ಪಾತ್ರೆಗಳನ್ನು ತಂದಿದ್ದ. ಆಟವಾಡುತ್ತ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಕೆಲ ಹೊತ್ತು ಹಾಗೇ ಆಟವಾಡಿದ್ದಾನೆ. ಬಳಿಕ ಪಾತ್ರೆ ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.