ಬೆಂಗಳೂರು: ನಿನ್ನೆಯಷ್ಟೇ (ಆಗಸ್ಟ್ 23ರಂದು)ಚಂದ್ರಯಾನ 3 ಯಶಸ್ಸಿಗಾಗಿ ಇಡೀ ದೇಶವೇ ಸಂಭ್ರಮಿಸಿತು.ಬಹುನಿರೀಕ್ಷಿತ ಚಂದ್ರಯಾನ ೩ ಲ್ಯಾಂಡಿಂಗ್ ಕ್ಷಣಗಳು ಎಲ್ಲರನ್ನು ಮೈ ರೋಮಾಂಚನಗೊಳಿಸುವಂತೆ ಮಾಡಿತು. ಅಂತು ಇಡೀ ದೇಶವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಹೌದು,ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಯಶಸ್ವಿಯಾಗುತ್ತಿದ್ದಂತೆಯೇ, ಇದೀಗ ಲ್ಯಾಂಡರ್ನಿಂದ ಹೊರಬರುವ ರೋವರ್ನ ಮೊದಲ ಫೋಟೋದ ಬಗ್ಗೆ ಜನ ಕುತೂಹಲದಲ್ಲಿದ್ದಾರೆ.ಇಸ್ರೋ ಫೋಟೋವೊಂದನ್ನು ಬಿಡುಗಡೆ ಮಾಡಿದ್ದು,ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ರೋವರ್ ಲ್ಯಾಂಡರ್ನಿಂದ ಕೆಳಕ್ಕೆ ಇಳಿದಿದ್ದು, ಭಾರತವು ಚಂದ್ರನ ಮೇಲೆ ನಡೆದಾಡಿತು. ಶೀಘ್ರದಲ್ಲೇ ಹೆಚ್ಚಿನ ವಿವರ ಹಂಚಿಕೊಳ್ಳುವುದಾಗಿ ಹೇಳಿ ಫೋಟೊವೊಂದನ್ನು ಶೇರ್ ಮಾಡಿದೆ.
ಇದಕ್ಕೂ ಮುನ್ನ ಚಂದ್ರಯಾನ-3 ಮಿಷನ್ ನ ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲ್ಮೈ ನಲ್ಲಿ ಇಳಿಯುವಾಗ ಸೆರೆ ಹಿಡಿಯಲಾದ ನಾಲ್ಕು ಫೋಟೋಗಳನ್ನು ಇಸ್ರೋ ಹಂಚಿಕೊಂಡಿತ್ತು.