ನ್ಯೂಸ್ ನಾಟೌಟ್ : ಕೇರಳದಲ್ಲಿ ಕಳ್ಳನೊಬ್ಬ ಡೀಲರ್ಶಿಪ್ನಿಂದ ಹೊಚ್ಚ ಹೊಸ ವೋಕ್ಸ್ ವ್ಯಾಗನ್ ಟೈಗುನ್ ಅನ್ನು ಕದ್ದ ಘಟನೆಯೊಂದು ವರದಿಯಾಗಿದೆ.ಆದರೆ ಕೆಲವೇ ಕ್ಷಣಗಳಲ್ಲಿ ಪೆಟ್ರೋಲ್ ಹಾಕಲು ಹೋದಾಗ ಸಿಕ್ಕಿಬಿದ್ದಿದ್ದಾನೆ.ಎಸ್ಯುವಿ ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು (Viral News) ಸೆರೆಯಾಗಿವೆ.
ಈ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್ ಒಂದು ಹಂಚಿಕೊಂಡಿದ್ದು,ಈ ವರ್ಷದ ಜುಲೈ 28ರಂದು ಈ ಘಟನೆ ನಡೆದಿದೆ.ಎರ್ನಾಕುಲಂನ ಕುಂದನ್ನೂರ್ ಪ್ರದೇಶದ ವೋಗ್ಸ್ ವ್ಯಾಗನ್ ಡೀಲರ್ಶಿಪ್ನಿಂದ ಕಾರನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.ಕಾರನ್ನು ಕದ್ದ ನಂತರ,ಕಳ್ಳನು ಮುಂಜಾನೆ 3 ಗಂಟೆ ಸುಮಾರಿಗೆ ಹತ್ತಿರದ ಪೆಟ್ರೋಲ್ ಪಂಪ್ಗೆ ಹೋಗಿದ್ದ.ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸಲು ಅವರು ಸಿಬ್ಬಂದಿಯನ್ನು ಕೇಳಿದ್ದ.ಸಿಬ್ಬಂದಿ ಹಣ ಕೇಳಿದಾಗ ವ್ಯವಸ್ಥಾಪಕರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದ.
ಘಟನೆಯ ಸಮಯದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಇಬ್ಬರು ಇದ್ದರುದ್ದು,ಫಲಕ ಇಲ್ಲದ ಕಾರನ್ನು ಕಂಡು ಅನುಮಾನ ಮೂಡಿ ಬಂತು.ಪಾವತಿಯನ್ನು ದೃಢೀಕರಿಸಲು ವ್ಯವಸ್ಥಾಪಕರನ್ನು ಕರೆಯಬೇಕಾಗಿದೆ ಎಂದು ಕಳ್ಳನಿಗೆ ತಿಳಿಸಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಪೊಲೀಸರು ತಕ್ಷಣ ಪೆಟ್ರೋಲ್ ಬಂಕ್ಗೆ ಬಂದು ಕಳ್ಳರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೆಟ್ರೋಲ್ ಹಣವನ್ನೂ ಉಳಿಸಲು ಹೋದ ಕಳ್ಳರು ಕಾರು ಸಮೇತ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತ ಹಣವನ್ನು ಪಾವತಿಸಿದ್ದರೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಅನುಮಾನ ಬರುತ್ತಿರಲಿಲ್ಲ.
ವಾಹನವನ್ನು ಕದ್ದ ವ್ಯಕ್ತಿಯ ನಿಖರವಾದ ವಿವರಗಳು ಲಭ್ಯವಿಲ್ಲ. ಅವನು ಚಾಳಿ ಹಿಡಿದ ಅಪರಾಧಿಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಕಳ್ಳನು ಡೀಲರ್ಶಿಪ್ನಿಂದ ಹೊಚ್ಚ ಹೊಸ ವಾಹನವನ್ನು ಕದಿಯಲು ಹೇಗೆ ಸಾಧ್ಯವಾಯಿತು ಎಂಬುದೂ ಆಶ್ಚಯರ್ಯ ಮೂಡಿದೆ.