ನ್ಯೂಸ್ ನಾಟೌಟ್: ಪಬ್ಜಿ (PUBG) ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ನನ್ನು ಪೊಲೀಸರು ಮತ್ತು ರಾಷ್ಟ್ರೀಯ ತನಿಖಾದಳಗಳು ಆಕೆ ಪಾಕ್ ಗುಪ್ತಚರ ಏಜೆಂಟ್ ಎಂಬ ವಿಚಾರದಲ್ಲಿ ಮತ್ತು ಅಕ್ರಮ ಭಾರತ ಪ್ರವೇಶಕ್ಕೆ ಸಂಬಂಧಿಸಿದಂತೆ ಹಲವು ರೀತಿಯಲ್ಲಿ ತನಿಖೆ ನಡೆಸಿತ್ತು. ಈಗ ಆಕೆ ಭಾರತದಲ್ಲೇ ಉಳಿಯಲು ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ತಾನು ಎಂದೂ ಕಾಣದ ಪ್ರೀತಿಯನ್ನು ನನ್ನ ಪತಿ ಸಚಿನ್ ಮೀನಾ ಹಾಗೂ ಆತನ ತಂದೆ-ತಾಯಿಯಿಂದ ಕಂಡಿದ್ದೇನೆ. ತನ್ನ ನಾಲ್ವರು ಮಕ್ಕಳೊಂದಿಗೆ ಭಾರತದಲ್ಲೇ ಉಳಿಯಲು ಅವಕಾಶ ನೀಡಬೇಕು ಎಂದು ರಾಷ್ಟ್ರಪತಿ ಅವರಿಂದ ಮೌಖಿಕ ವಿಚಾರಣೆಗೆ ಒತ್ತಾಯಿಸಿದ್ದಾರೆ. ಸೀಮಾ ಹೈದರ್ ಪರ ವಕೀಲ ಎ.ಪಿ ಸಿಂಗ್ ಸಲ್ಲಿಸಿದ 38 ಪುಟಗಳ ಅರ್ಜಿಯಲ್ಲಿ ಅನೇಕ ಬಾಲಿವುಡ್ ನಟ-ನಟಿಯರನ್ನ ಉದಾಹರಣೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಭಾರತದ ಸಂಸ್ಕೃತಿಯ ಉದ್ದೇಶ ವಸುದೈವ ಕುಟುಂಬಕಂ ಎಂಬಂತೆ ತನ್ನನ್ನು ಗಂಡನ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕು. ಸೀಮಾ ಮದುವೆಯಾಗುವುದಕ್ಕೂ ಮುನ್ನವೇ ಸ್ವಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅರ್ಜಿದಾರರಿಗೆ ಭಾರತಕ್ಕೆ ಬರಲು ವೀಸಾ ಸಿಕ್ಕಿಲ್ಲದಿದ್ದರಿಂದ ನೇಪಾಳ ವೀಸಾ ತೆಗೆದುಕೊಂಡು ಭಾರತಕ್ಕೆ ಬಂದಿದ್ದಾರೆ. ಇಸ್ಲಾಂ ಧರ್ಮವನ್ನು ತೊರೆದಿದ್ದಾರೆ. ಕಠ್ಮಂಡುವಿನ ಪವಿತ್ರ ದೇವಾಲಯ ಭಗವಾನ್ ಪಶುಪತಿ ನಾಥ ಮಂದಿರದಲ್ಲಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಸಚಿನ್ ಮೀನಾ ಅವರನ್ನ ವಿವಾಹವಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸಿದ್ಧ ಗಾಯಕ ಅದ್ನಾನ್ ಸಾಮಿ (Adnan Sami) ದೇಶದಲ್ಲಿ ದೀರ್ಘಕಾಲ ನೆಲೆಸಿರುವ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ. ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಭಾರತವು ವಿಶ್ವದ ಇತರ ದೇಶಗಳಂತೆ ದ್ವಿಪೌರತ್ವವನ್ನು ನೀಡದ ಕಾರಣ ಭಾರತದಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಕೆನಡಾ ಪೌರತ್ವವನ್ನು ಪಡೆದು ಭಾರತಲ್ಲಿ ನೆಲೆಸಿದ್ದಾರೆ. ಆದ್ದರಿಂದ ತಮ್ಮನ್ನೂ ಭಾರತಲ್ಲೇ ಉಳಿಯಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.