ನ್ಯೂಸ್ ನಾಟೌಟ್ :ಮದುವೆ ಅನ್ನೋ ವಿಚಾರ ಭಾರಿ ವಂಚನೆಗಳಾಗ್ತ ಇರೋ ಬಗ್ಗೆ ನಾವು ಕೇಳಿದ್ದೇವೆ. ಮೊನ್ನೆಯಷ್ಟೇ ಮಹೇಶ್ ಎಂಬ ವ್ಯಕ್ತಿ ಬರೋಬ್ಬರಿ 12 ಮದುವೆಯಾಗಿ ಮಹಿಳೆಯರಿಗೆ ವಂಚಿಸುತ್ತಿದ್ದ ಬಗ್ಗೆ ವರದಿಯಾಗಿತ್ತು.ಇದೀಗ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಮುನ್ನೆಲೆಗೆ ಬಂದಿದೆ.
ಈಕೆಯ ಹೆಸರು ರಶೀದಾ.ಈಕೆಯ ಮಹಾವಂಚನೆ ಇದೀಗ ಬಯಲಾಗಿದೆ.ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯುವತಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ ಎನ್ನುವ ಸತ್ಯ ಇದೀಗ ಬಯಲಾಗಿದೆ.ಮದುವೆಯಾದ ಕೆಲವೇ ದಿನಗಳಲ್ಲಿ ಈಕೆ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು ಎಂದು ತಿಳಿದು ಬಂದಿದೆ.
ರಶೀದಾ ಇನ್ಸ್ಟಾಗ್ರಾಂ ಮೂಲಕ ಯುವಕರನ್ನು ಬಲೆಗೆ ಬೀಳಿಸುತ್ತಿದ್ದು,ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲ ಮೂಲದ ಫೈನಾನ್ಶಿಯರ್ ಮೂರ್ತಿ ಎಂಬುವವರ ಪರಿಚಯವಾಗಿತ್ತು.ಹಲವು ತಿಂಗಳುಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆದಿದ್ದು ಬಳಿಕ ಪರಿಚಯ ಪ್ರೀತಿಗೆ ತಿರುಗಿ ರಶೀದಾ ಮದುವೆ ಆಗುವ ಬಯಕೆಯನ್ನು ಮೂರ್ತಿ ಮುಂದೆ ವ್ಯಕ್ತಪಡಿಸಿದ್ದಾಳೆ.
ಇಬ್ಬರ ಮದುವೆ ಕಳೆದ ಮಾರ್ಚ್ 30ರಂದು ನಡೆದಿದೆ.ಆದರೆ,ಮದುವೆಯಾದ ಕೆಲವೇ ದಿನಗಳಲ್ಲಿ ರಶೀದಾ ಮನೆ ಬಿಟ್ಟು ನಾಪತ್ತೆಯಾಗಿದ್ದಾಳೆ.ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.ಕೊನೆಗೆ ತಾನು ಮೋಸ ಹೋಗಿರುವುದು ಮೂರ್ತಿಗೆ ಅರ್ಥವಾಗಿದ್ದು, ಬಳಿಕ ಸ್ಥಳೀಯ ಠಾಣೆಗೆ ಆಕೆಯ ವಿರುದ್ಧ ದೂರು ನೀಡಿದ್ದಾರೆ.
ಮೂರ್ತಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ರಶೀದಾಳ ಅಸಲಿಯತ್ತು ಬಯಲಾಯಿತು.ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಈಕೆ ವಂಚಿಸುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.ಶ್ರೀಮಂತ ಯುವಕರೇ ಈಕೆಯ ಟಾರ್ಗೆಟ್ ಆಗಿದ್ದು,ಅವರನ್ನು ಪರಿಚಯ ಮಾಡಿಕೊಂಡು ಪರಿಚಯಿಸಿಕೊಂಡು,ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.