ನ್ಯೂಸ್ ನಾಟೌಟ್: ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ, ಜೂ.12 ರಂದು ಸ೦ಭವಿಸಿದೆ.ಕೊಕ್ಕಡ ಗ್ರಾಮದ ಕೌಕ್ರಾಡಿಯ ಸೌತಡ್ಕ ಸಮೀಪದಲ್ಲಿರುವ ಮೀಯಾಳ ನಿವಾಸಿ ನಾಗೇಶ್ ನಳಿಯಾರ್ – ಹೇಮಾವತಿ ದಂಪತಿ ಪುತ್ರಿ ಶ್ರಾವ್ಯ(17) ಮೃತ ದುರ್ದೈವಿ. ಉಜಿರೆಯ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿ೦ದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಶ್ರಾವ್ಯ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಆಕೆ ಆರೋಗ್ಯದಲ್ಲಿ ತೀರ ಏರುಪೇರು ಉಂಟಾಗಿದ್ದು ಚಿಕಿತ್ಸೆಗಾಗಿ ಪುತ್ತೂರಿನ ವೈದ್ಯರ ಸಲಹೆ ಮೇರೆಗೆ ಮ೦ಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಆಕೆ ಬದುಕುಳಿಯಲಿಲ್ಲ!.ಈ ಬಗ್ಗೆ ಆಕೆಯ ಪೋಷಕರು ಉಪ್ಪಿನ೦ಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.