ನ್ಯೂಸ್ ನಾಟೌಟ್: ಜಗತ್ತಿನ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮರಿಕದಲ್ಲಿ ಈಗ ಮೊದಿಯದ್ದೇ ಹವಾ. ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಮೋದಿ ಹೋದಲ್ಲೆಲ್ಲ ಭರ್ಜರಿ ಸ್ವಾಗತ. ಮೋದಿ ಶ್ವೇತ ಭವನಕ್ಕೂ ಭೇಟಿ ನೀಡಿದರು. ಈ ವೇಳೆ US ಅಧ್ಯಕ್ಷ ಬೈಡನ್, ಅಮೆರಿಕ ಫಸ್ಟ್ ಲೇಡಿ ಜಿಲ್ ಬೈಡನ್ ಸೇರಿದಂತೆ ಹಲವು ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ದ್ವಿಪಕ್ಷೀಯ ಮಾತುಕತೆ, ಹಲವು ಒಪ್ಪಂದ, ಸ್ಟೇಟ್ ಡಿನ್ನರ್, ಮಾಧ್ಯಮಗೋಷ್ಟಿಗಳು ನಡೆದವು. ಜಂಟಿ ಸುದ್ದಿಗೋಷ್ಠಿ ಬಳಿಕ ಅಮರಿಕಾದ ಸಂಸತ್ಗೆ ಪ್ರಧಾನಿ ಮೋದಿ ಆಗಮಿಸಿದರು. ಜಂಟಿ ಅಧಿವೇಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಸದನದ ಸದಸ್ಯರೆಲ್ಲಾ ಜೈಕಾರದ ಘೋಷಣೆ ಕೂಗಿದರು. ಯುಎಸ್ ಕಾಂಗ್ರೆಸ್ನ ನಾಯಕರು ಮೋದಿ.. ಮೋದಿ.. ಮೋದಿ.. ಅನ್ನೋ ಘೋಷಣೆ ಮೊಳಗಿಸಿದರು. ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾರತದ ಅರ್ಥಿಕತೆ ಬೆಳೆಯುತ್ತಿರೋ ಶರವೇಗವನ್ನ ಕೊಂಡಾಡಿದ್ದಾರೆ. ಟಾಪ್ 3ಗೆ ಶೀಘ್ರ ಬರೋದಾಗಿಯೋ ಮೋದಿ ತಿಳಿಸಿದರು.
ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೇರಿಕಾಕ್ಕೆ ಭೇಟಿ ನೀಡಿದಾಗ, ಭಾರತವು ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು ಅತಿದೊಡ್ಡ ಆರ್ಥಿಕತೆಯಲ್ಲಿ 5 ನೇ ಸ್ಥಾನಕ್ಕೇರಿದೆ. ಭಾರತವು ಅತೀ ಶೀಘ್ರದಲ್ಲೇ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡದಾಗಿ ಬೆಳೆಯುವುದು ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ ಬೆಳೆದಾಗ ಇಡೀ ಜಗತ್ತು ಬೆಳೆಯುತ್ತದೆ ಎಂದು ಮೋದಿ ಹೇಳಿದರು.