ನ್ಯೂಸ್ ನಾಟೌಟ್ : ತಾಯಿ ತನ್ನ ಮಗುವನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗಬೇಕೆಂದರೆ ಆ ಮಗು ಗಂಡು ಮಗು ಆಗಿರಬೇಕು ಹಾಗೂ ಆತನಿಗೆ ಕನಿಷ್ಟ ಅಂದರೂ ೧೫ ವರ್ಷ ಪ್ರಾಯವಾಗಿರಬೇಕು.ಅಲ್ಲಿಯವರೆಗೆ ಮನೆಯಲ್ಲಿ ಒಬ್ಬನನ್ನೇ ಬಿಟ್ಟು ಹೋಗುವ ಧೈರ್ಯ ಬರಲ್ಲ.ಆದರೆ ಇಲ್ಲೊಬ್ಬಳು ತಾಯಿ ತನ್ನ ಒಂದು ವರ್ಷ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬರೋಬ್ಬರಿ ೧೦ ದಿನಗಳ ಕಾಲ ಒಂಟಿಯಾಗಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ವರದಿಯಾಗಿದೆ.
ಹೌದು ,ತಾನು ಪ್ರವಾಸ ಮಾಡಬೇಕು ಎನ್ನುವ ಚಟಕ್ಕೆ ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು ಮಾತ್ರವಲ್ಲದೇ ಮಗು ಹಸಿವಿನಿಂದ ಸಾವನ್ನಪ್ಪಿದೆ ಎನ್ನುವ ವರದಿ ಲಭ್ಯವಾಗಿದೆ.ಕ್ಲೀವ್ಲ್ಯಾಂಡ್ನ ಓಹಿಯೋ ನಗರದ ತಾಯಿಯೊಬ್ಬರು ತನ್ನ 16 ತಿಂಗಳ ಮಗು ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು 10 ದಿನಗಳ ಕಾಲ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದಾಳೆ. ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋಗಿದ್ದರಿಂದ ಹಸಿವು, ಬಾಯಾರಿಕೆಯಿಂದ ಮಗು ಸಾವನ್ನಪ್ಪಿದೆ. ಹೀಗಾಗಿ ತಾಯಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಎಂಬ 31 ವರ್ಷ ಮಹಿಳೆ ತನ್ನ 16 ತಿಂಗಳ ಹೆಣ್ಣು ಮಗು ಜೈಲಿನ್ ಅವರನ್ನು ಕ್ಲೀವ್ಲ್ಯಾಂಡ್ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗಿರುವ ಕಾರಣ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯುಯಾಹೋಗಾ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ಪ್ರಕಾರ, “ಮಗುವಿನ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಮಗುವನ್ನು ಸುಮಾರು 10 ದಿನಗಳ ಕಾಲ ಏಕಾಂಗಿಯಾಗಿ ಬಿಡಲಾಗಿತ್ತು ಹೀಗಾಗಿ ಅದು ಸಾವನ್ನಪ್ಪಿದೆ” ಎಂದು ಹೇಳಿದ್ದಾರೆ.
ಡಿಟೆಕ್ಟಿವ್ ಥೆಲೆಮನ್ ಪೊವೆಲ್ ಜೂನಿಯರ್ ಅಫಿಡವಿಟ್ನಲ್ಲಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರು ತಮ್ಮ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಮತ್ತು ಗಮನಿಸದೆ ಬಿಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖಾಧಿಕಾರಿಗಳು ಮತ್ತು ಅಕ್ಕ ಪಕ್ಕದ ಶಂಕಿತರು ಅವರು ಮನೆಗೆ ಬಂದಾಗ ಹಸುಗೂಸು “ಅತ್ಯಂತ ನಿರ್ಜಲೀಕರಣಗೊಂಡಿದೆ” ಎಂದು ಹೇಳಿದ್ದಾರೆ. ಮಗುವಿನ ಹಾಸಿಗೆಗಳು ಕೋಳಕಾಗಿದ್ದವು. ಹೊದಿಕೆಗಳು ಮೂತ್ರ ಮತ್ತು ಮಲದಿಂದ ತುಂಬಿದ್ದವು. ಮಗು ಊಟ, ನೀರಿಲ್ಲದೆ ಅತ್ತೂ ಅತ್ತೂ ಸಾವನ್ನಪ್ಪಿದೆ ಎಂದು ಡಿಟೆಕ್ಟಿವ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಆರೋಪಿ ತಾಯಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರನ್ನು 1 ಮಿಲಿಯನ್ ಡಾಲರ್ ಬಾಂಡ್ನಲ್ಲಿ ಕ್ಯುಯಾಹೋಗಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ.ಆರೋಪಿ ನವೆಂಬರ್ 2022 ರಿಂದ ಕ್ಲೀವ್ಲ್ಯಾಂಡ್ನ ಪ್ರಾಥಮಿಕ ಶಾಲೆಯಾದ ಸಿಟಿಜನ್ಸ್ ಅಕಾಡೆಮಿ ಗ್ಲೆನ್ವಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಆಕೆಯನ್ನು ಶಾಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ. ಆಕೆ ಪ್ರವಾಸಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕೊಂಡಿದ್ದೆವು. ಆಕೆ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆಂದು ನಮಗೆ ನಂಬಲಾಗಲಿಲ್ಲ. ಆ ಮಗು ಯಾವಾಗಲೂ ನಗುತ್ತಿರುವ,ಕುತೂಹಲದಿಂದ ಕೂಡಿದ್ದ ಅದ್ಭುತ ಮಗು ಎಂದು ನೆರೆ ಹೊರೆಯವರು ಹೇಳಿದ್ದಾರೆ. ಇನ್ನೊಬ್ಬರು ಮಗುವನ್ನು ಆಕೆ ಒಬ್ಬಂಟಿಯಾಗಿ ಬಿಟ್ಟಿರುವುದು ಇದೇ ಮೊದಲಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.