ನ್ಯೂಸ್ ನಾಟೌಟ್ : ನಟ-ನಟಿಯರನ್ನು ಜನ ಎಷ್ಟು ಗಮನಿಸುತ್ತಿರುತ್ತಾರೆ ಎನ್ನುವುದಕ್ಕೆ ಈ ದೃಶ್ಯಗಳೇ ಸಾಕ್ಷಿ.ಎಲ್ಲರಿಗೂ ಮಾದರಿಯಾಗಬೇಕಾದ ವ್ಯಕ್ತಿಗಳು ಸ್ವಲ್ಪ ಎಡವಿದರೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ.ಜನರಿಗೆ ಬುದ್ದಿ,ಸಂದೇಶ ಹೇಳಬೇಕಾದವರೇ ಸಣ್ಣ ತಪ್ಪುಗಳನ್ನು ಮಾಡಿದರೂಜನ ಅವರನ್ನು ಗಮನಿಸಿ ಅನುಕರಣೆ ಮಾಡುವುದಕ್ಕೆ ಶುರು ಮಾಡಲೂ ಬಹುದು.ಯಾಕೆಂದರೆ ಅಭಿಮಾನಿಗಳು ಅವರ ಪ್ರೇರಣೆಗೊಳಗಾಗುದೇ ಹೆಚ್ಚು!
ಇದು ಮುಂಬೈಯಲ್ಲಿ ನಡೆದ ಘಟನೆ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಹಾಗೂ ನಟಿ ಅನುಷ್ಕಾ ಶರ್ಮ ಅವರು ಬೈಕ್ನಲ್ಲಿ ಹಿಂಬದಿಗೆ ಕುಳಿತು ರೈಡ್ ಮಾಡುತ್ತಿರುವ ಫೋಟೋ-ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.ಇದಕ್ಕೆ ಲಕ್ಷಾಂತರ ಕಾಮೆಂಟ್ ಗಳು ಬಂದಿದ್ದು ಇದೀಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆನ್ನುವ ಸುದ್ದಿ ಲಭ್ಯವಾಗಿದೆ.ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದು,ಸಮಾಜ ನಿಮ್ಮನ್ನು ಗಮನಿಸುತ್ತದೆ ಎಂದು ಕ್ಯಾತೆ ತೆಗೆದಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಸೋಮವಾರ ಶೂಟಿಂಗ್ ಸ್ಥಳಕ್ಕೆ ಹೋಗುವಾಗ ತಮ್ಮ ಅಭಿಮಾನಿಯೊಬ್ಬರ ಬೈಕ್ನಲ್ಲಿ ಡ್ರಾಪ್ ಪಡೆದಿದ್ದರು. ವಿಪರೀತ ಟ್ರಾಫಿಕ್ ಇದ್ದ ಕಾರಣ, ಕಾರಿನಲ್ಲಿ ಹೋದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಬೈಕ್ ಏರಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ತಮ್ಮನ್ನು ಶೂಟಿಂಗ್ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಿಸಿದ್ದಕ್ಕೆ ಅಭಿಮಾನಿಗೆ ಧನ್ಯವಾದ ಸಲ್ಲಿಸಿದ್ದರು.ಆದರೆ ಬೈಕ್ ಏರಿದ ಅಮಿತಾಬ್ ಬಚ್ಚನ್ ಅವರು ಹೆಲ್ಮೆಟ್ ಧರಿಸಿರಲಿಲ್ಲ!.ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಅದೇ ದಿನ ಅನುಷ್ಕಾ ಶರ್ಮಾ ಅವರೂ ಕೂಡ ತಮ್ಮ ಬಾಡಿಗಾರ್ಡ್ ಜತೆ ಬೈಕ್ನಲ್ಲಿ ಹೋಗಿದ್ದರು. ಅನುಷ್ಕಾ ಅವರು ಜುಹು ಬಳಿ ಎಲ್ಲಿಯೋ ಹೋಗಬೇಕಿತ್ತು. ಆದರೆ ಅವರು ಹೋಗುವ ಮಾರ್ಗದಲ್ಲಿ ಮರ ಬಿದ್ದು, ರಸ್ತೆ ಬ್ಲಾಕ್ ಆಗಿ, ಕಾರಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ಅನುಷ್ಕಾ ತಮ್ಮ ಬಾಡಿಗಾರ್ಡ್ ಜತೆ ಬೈಕ್ನಲ್ಲಿ ತೆರಳಿದ್ದರು. ಈ ವಿಡಿಯೊ-ಫೋಟೋಗಳು ಕೂಡ ವೈರಲ್ ಆಗಿದ್ದವು.ಈ ಫೋಟೋದಲ್ಲಿಯೂ ಅನುಷ್ಕಾ ಶರ್ಮ ಹೆಲ್ಮೆಟ್ ಧರಿಸಿರಲಿಲ್ಲ.ಇದು ಕೂಡ ಭಾರಿ ಚರ್ಚೆಗೆ ಗುರಿಯಾಗಿತ್ತು.ಕೆಲವರಂತೂ ವಿಡಿಯೊಗಳಿಗೆ ಮುಂಬಯಿ ಟ್ರಾಫಿಕ್ ಪೊಲೀಸ್ರನ್ನು ಟ್ಯಾಗ್ ಮಾಡಿದ್ದರು.
ಅನುಷ್ಕಾ ಶರ್ಮಾ ಮತ್ತು ಅಮಿತಾಭ್ ಬಚ್ಚನ್ ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಅನುಷ್ಕಾ ಶರ್ಮಾ ಅವರು ತಮ್ಮ ಮುಂದಿನ ಸಿನಿಮಾ ಚಕ್ಡಾ ಎಕ್ಸ್ಪ್ರೆಸ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಅಮಿತಾಬ್ ಬಚ್ಚನ್ ಅವರು ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಬ್ಯುಸಿ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಅಮಿತಾಬ್ ಬಚ್ಚನ್ ಜತೆ ಪ್ರಭಾಸ್, ದೀಪಿಕಾ ಪಡುಕೋಣೆ ಕೂಡ ಸಿನಿಮಾದಲ್ಲಿದ್ದಾರೆ. ಆದರೆ ಇವರಿಬ್ಬರ ವರ್ತನೆ ಸದ್ಯ ನೆಟ್ಟಿಗರಿಗೆ ಅಸಮಾಧಾನ ತಂದುಕೊಟ್ಟಿತ್ತು.