ನ್ಯೂಸ್ ನಾಟೌಟ್: ಮನೆಯಲ್ಲಿ ಮಲಗಿದ್ದ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಪೋಷಕರು ದೂರು ಕೊಟ್ಟು ಪೊಲೀಸರನ್ನು ಎಲ್ಲೆಡೆ ಹುಡುಕಿಸಿದ ಪೋಷಕರು ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಪೊಲೀಸರ ಜತೆ ಸೇರಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್ ಬಂದು ನೋಡಿದಾಗ ಬಾಲಕಿ ಮನೆಯಲ್ಲೇ ಇರುವುದನ್ನು ಕಂಡು ಬಂದಿದ್ದು, ಪೋಷಕರ ಅವಸ್ಥೆಗೆ ಪೊಲೀಸರು ಹುಡುಕಿ ಸುಸ್ತಾಗಿದ್ದಾರೆ.