ನ್ಯೂಸ್ ನಾಟೌಟ್ : ಮಾಣಿ ಎಂಬಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಕಾಯರಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.
ಮೇ.2 ರಂದು ವಾಲ್ಟರ್ ರವರು ಕಾಯರಡ್ಕದ ರಬ್ಬರ್ ತೋಟಕ್ಕೆ ಹೋಗಿ ರಿಜಿ ಅವರಿಗೆ ಸಂಬಳವನ್ನು ನೀಡಿದ್ದಾರೆ. ತದನಂತರದಲ್ಲಿ ವಾಲ್ಟರ್ ರವರು ರಿಜಿ ರನ್ನು ಭೇಟಿಯಾಗುವುದಾಗಲಿ, ಪೋನ್ ಕರೆಯನ್ನು ಮಾಡಿಲ್ಲ. ಮೇ.12 ರಂದು ಕಾಯರಡ್ಕದ ತೋಟದಲ್ಲಿರುವ ರಿಜಿ ವಾಸಿಸುತ್ತಿದ್ದ ಮನೆಯ ಬಳಿ ಬಂದಾಗ ಮನೆ ಒಳಗಿನಿಂದ ವಿಪರೀತ ವಾಸನೆ ಬರುತ್ತಿತ್ತು ಎನ್ನಲಾಗಿದೆ.ಮನೆಯ ಮುಂದಿನ ಬಾಗಿಲು ಮೂಲಕ ಇಣುಕಿ ನೋಡಿದಾಗ ರಿಜಿಜಾನ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ರಿಜಿಜಾನ್ ರವರು ವಿಪರೀತ ಮದ್ಯ ಸೇವನೆಯ ಚಟವನ್ನು ಹೊಂದಿದ್ದ ಕಾರಣ ಅಸೌಖ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.