ನ್ಯೂಸ್ನಾಟೌಟ್: ಪ್ರಿಯಕರನೊಂದಿಗೆ ಮಾತನಾಡುತ್ತಿದ್ದ ಹುಡುಗಿಯನ್ನು ಆಕೆಯ ತಾಯಿ ಮತ್ತು ಸಹೋದರರು ಕಡಿದು ಕೊಂದ ಆರೋಪದ ಮೇಲೆ ಅಜ್ಮೀರ್ನ ಶ್ರೀನಗರ ಪೊಲೀಸರು ಇಬ್ಬರೂ ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ಸೋನು ಎಂಬಾಕೆ ಏಪ್ರಿಲ್ 29 ರಂದು ಮಾನ್ಪುರ ಕಾಡಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು, ಮೂರು ದಿನಗಳ ನಂತರ ಅವಳ ಸಂಬಂಧಿಕರು ನಾಪತ್ತೆಯಾಗಿದ್ದಾರೆ ಎಂದು ದುರು ನೀಡಿದ್ದರು.
ಆರಂಭದಲ್ಲಿ, ಆಕೆಯ ಕುಟುಂಬ ಸದಸ್ಯರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು, ಆದರೆ ಪೊಲೀಸರು ಅವರ ಹೇಳಿಕೆಗಳನ್ನು ಅನುಮಾನಿಸಲು ಪ್ರಾರಂಭಿಸಿದಾಗ ತನಿಖೆಯಲ್ಲಿ ನಿಜ ಬಯಲಾಯಿತು ಎನ್ನಲಾಗಿದೆ.
ಸಂಪೂರ್ಣ ತನಿಖೆ ಮತ್ತು ಕಟ್ಟುನಿಟ್ಟಿನ ವಿಚಾರಣೆಯ ನಂತರ, ಪೊಲೀಸರು ಸೋನು ಅವರ ತಾಯಿ ಮತ್ತು ಸಹೋದರನ ಹೇಳಿಕೆಗಳಲ್ಲಿ ವಿವಿಧ ವಿಷಯಗಳನ್ನು ತಿಳಿದುಕೊಂಡರು. ಈ ಕಾರಣಕ್ಕೆ ಆಕೆಯ ತಾಯಿ ಮತ್ತು ಸಹೋದರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಸೋನು ಎಂಬಾಕೆ ಅಪರಿಚಿತ ಯುವಕನೊಂದಿಗೆ ದಿನಂಪ್ರತಿ ಬಹಳ ಸಮಯಗಳ ಕಾಲ ಫೋನ್ನಲ್ಲಿ ಮಾತನಾಡುತ್ತಿದ್ದಳು, ಇದು ಅವನ ತಾಯಿ ಮತ್ತು ಸಹೋದರನಿಗೆ ಕಿರಿಕಿರಿ ಉಂಟುಮಾಡುತ್ತದೆ.
ಕೋಪದ ಭರದಲ್ಲಿ ಕೈಗೆ ಸಿಕ್ಕಿದ ಕೊಡಲಿಯಿಂದ ಹೊಡೆಯುತ್ತಾರೆ, ಹೊಡೆತಕ್ಕೆ ಪ್ರಾಣಬಿಟ್ಟ ಆಕೆಯ ಪುರಾವೆಗಳನ್ನು ತಾಯಿ ಮತ್ತು ಸಹೋದರ ಸೇರಿ ನಾಶ ಪಡಿಸುತ್ತಾರೆ. ನಂತರ ಆಕೆಯ ದೇಹವನ್ನು ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರ ಮೂಲಗಳು ತಿಳಿಸಿವೆ. ಪೊಲೀಸರು ಸೋನು ಅವರ ತಾಯಿ ಶಾಂತಿ ಬೇಗಂ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡರು ಎನ್ನಲಾಗಿದೆ.
ಯುವಕನೊಂದಿಗೆ ಮಾತನಾಡುವುದನ್ನು ನಿಲ್ಲಿಸುವಂತೆ ಮಗಳನ್ನು ಮನವೊಲಿಸಲು ಪ್ರಯತ್ನಿಸಿದೆ, ಆದರೆ ಅವಳು ಒಪ್ಪಲಿಲ್ಲ. ಏಪ್ರಿಲ್ 26 ರಂದು ಮಧ್ಯಾಹ್ನ ಶಾಂತಿ ಬೇಗಂ ಸೋನುವಿನ ತಲೆಗೆ ಕೊಡಲಿಯಿಂದ ಹೊಡೆದು ಕೊಂದಿದ್ದಳು. ನಂತರ ಆಕೆಯ ಮಗ ಹನೀಫ್ ಜೊತೆಗೆ ಶವವನ್ನು ಬಾವಿಗೆ ಎಸೆದು ಮನೆಗೆ ಮರಳಿದ್ದಾಳೆ ಎನ್ನಲಾಗಿದೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.