ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಸಿ.ಎಂ, ಡಿಸಿ.ಎಂ,ಸಚಿವರ ಆಯ್ಕೆಯೂ ಆಗಿದೆ.ನೂತನ ಸ್ಪೀಕರ್ ಆಗಿ ಕರಾವಳಿಯ ಯು.ಟಿ.ಖಾದರ್ ಅವರು ಆಯ್ಕೆಯಾಗಿದ್ದು,ದ.ಕ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಇದೀಗ ಇವರಿಗೆ ಎಲ್ಲೆಡೆ ಅಭಿನಂದನೆ , ಸನ್ಮಾನಗಳು ಅರಸಿಕೊಂಡು ಬರುತ್ತಿದ್ದು,ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ರವರನ್ನು ಕೆವಿಜಿ ವಿದ್ಯಾಸಂಸ್ಥೆಗಳ ಪರವಾಗಿ ಅಭಿನಂದಿಸಲಾಯಿತು. ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ವಿ ಲೀಲಾಧರ್ ರವರು ಮಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಕಿರಣ್ ಬುಡ್ಲೆಗುತ್ತು,ಸತೀಶ್ ಕೆ.ಜಿ ಉಪಸ್ಥಿತರಿದ್ದರು.