ನ್ಯೂಸ್ ನಾಟೌಟ್: ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘಣೆಯ ಆರೋಪದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ಇ ಕಾಮರ್ಸ್ ಪ್ಲಾಟ್ಫಾರ್ಮ್ಗಳ ವಿರುದ್ಧ ಕ್ರಮವನ್ನು ಕೈಗೊಂಡಿದೆ. ಪ್ಲಾಟ್ಫಾರ್ಮ್ನಲ್ಲಿನ ಕಾರಿನ ಸೀಟ್ ಬೆಲ್ಟ್ ಹಾಕದಿದ್ದರೆ ಬರುವ ಅಲರಾಂ ಅನ್ನು ನಿಲ್ಲಿಸುವ ಕ್ಲಿಪ್ಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಈ ಪ್ಲಾಟ್ಫಾರ್ಮ್ಗಳ ವಿರುದ್ಧ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ.
ಕಾರಿನಲ್ಲಿ ಪ್ರಯಾಣ ಮಾಡುವಾಗ ಬೆಲ್ಟ್ ಅನ್ನು ಹಾಕುವುದು ಸುರಕ್ಷತಾ ಕ್ರಮವಾಗಿದೆ. ಆದರೆ ಈ ಬೆಲ್ಟ್ ಹಾಕದೆ ಬರುವ ಅಲರಾಂ ಅನ್ನು ಕೂಡಾ ನಿಲ್ಲಿಸುವ ಕ್ಲಿಪ್ ಅನ್ನು ಮಾರಾಟ ಮಾಡುವ ಮೂಲಕ ಜನರ ಜೀವನ ಹಾಗೂ ಸುರಕ್ಷತೆಗೆ ಅಪಾಯ ತರಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.
ಮುಖ್ಯ ಆಯುಕ್ತ ನಿಧಿ ಖರೆ ನೇತೃತ್ವದಲ್ಲಿ ಸಿಸಿಪಿಎ ಅಮೆಜಾನ್, ಫ್ಲಿಪ್ಕಾರ್ಟ್, ಸ್ನ್ಯಾಪ್ಡೀಲ್, ಶಾಪ್ಕ್ಲೂಸ್ ಮತ್ತು ಮೀಶೋ ವಿರುದ್ಧ ಗ್ರಾಹಕರ ಹಕ್ಕುಗಳ ಉಲ್ಲಂಘನೆಯ ವ್ಯಾಪಾರದ ವಿರುದ್ಧ ಆದೇಶವನ್ನು ಜಾರಿಗೊಳಿಸಿದೆ.