ನ್ಯೂಸ್ ನಾಟೌಟ್: ಹಾವನ್ನು ಹಿಡಿದು ಹಿಂಸೆ ನೀಡಿದ ಮೂವರು ಆರೋಪಿಗಳನ್ನು ಮೊಬೈಲ್ ವಿಡಿಯೋ ಆಧರಿಸಿ ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ಯಲ್ಲಿ ನಡೆದಿದೆ.
ತಮಿಳುನಾಡಿನ ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ ಎಂಬ ಮೂವರು ಯುವಕರ ಹಾವೊಂದನ್ನು ಹಿಡಿದು ಹಿಂಸೆ ನೀಡುತ್ತಿದ್ದರು. ಈ ವೇಳೆ ಮೋಹನ್ ಎಂಬವರ ಕೈಗೆ ಹಾವು ಕಚ್ಚುತ್ತದೆ. ತನ್ನ ಕೈಗೆ ಕಚ್ಚಿದ ಹಾವಿನೊಂದಿಗೆ ಸೇಡು ತೀರಿಸಿಕೊಳ್ಳಬೇಕೆಂದು ಹಾವಿನ ತಲೆಗೆ ಕಚ್ಚಿ ವಿಚಿತ್ರವಾಗಿ ವರ್ತಿಸಿದ್ದಾನೆ.
ಇತರರು ಬಿಡುವಂತೆ ಕೇಳಿಕೊಂಡರೂ ಮೋಹನ್ ಹಾವಿನ ತಲೆಯನ್ನು ಕಚ್ಚಿ, ಹಿಂಸಿಸಿ ಅದನ್ನು ಸಾಯಿಸಿದ್ದಾನೆ. ಹಾವು ನೋವಿನಲ್ಲಿ ಒದ್ದಾಟ ನಡೆಸಿದರೂ ಅದನ್ನು ನೋಡಿ ಸ್ನೇಹಿತರು ನಕ್ಕಿದ್ದಾರೆ. ಈ ಘಟನೆ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಇಲಾಖೆಯ ಪೊಲೀಸರು ಪ್ರಾಣಿ ಹಿಂಸೆ ಮತ್ತು ಕಾಡು ಪ್ರಾಣಿಯನ್ನು ಕೊಂದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.